ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳ ಟೈಂ ಟೇಬಲ್‌ನಿಂದ ಯಶಸ್ಸು

ಪಿಯು ಟಾಪರ್ಸ್‌ ಟಿಪ್ಸ್‌
Last Updated 16 ಜುಲೈ 2020, 17:51 IST
ಅಕ್ಷರ ಗಾತ್ರ

//ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳ ಅಧ್ಯಯನ ಕ್ರಮ ಹೇಗಿತ್ತು? ಅವರ ಮಾತಿನಲ್ಲೇ ಕೇಳಿ//

ಪ್ರಥಮ ಪಿಯು ಪ್ರವೇಶ ಪಡೆಯುತ್ತಿದ್ದಾಗಲೇ ನಾನು ಎರಡೂ ವರ್ಷದ ಕಲಿಕೆ ಹೇಗಿರಬೇಕು ಎಂದು ಪಟ್ಟಿ ಮಾಡಿಕೊಂಡಿದ್ದೆ. ಪ್ರಥಮ ವರ್ಷದ ಪರೀಕ್ಷೆಯಲ್ಲಿ ಇದು ಸಫಲವಾಯಿತು. ಅದನ್ನೇ ದ್ವಿತೀಯ ವರ್ಷದಲ್ಲೂ ಮುಂದುವರಿಸಿದೆ. ಒಂದಿಡೀ ವರ್ಷದ ಪಠ್ಯಕ್ರಮವನ್ನು ಪರೀಕ್ಷೆ ಹತ್ತಿರ ಬಂದಾಗ ಓದುವುದು ಅಥವಾ ಬಾಯಿಪಾಠ ಅಥವಾ ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ನನ್ನದೇ ಆದ ಸರಳ ಸೂತ್ರ ಕಂಡುಕೊಂಡೆ.

ಪಠ್ಯಕ್ರಮವನ್ನು ಒಂದೊಂದು ತಿಂಗಳಿಗೆ ನಿಗದಿ ಮಾಡಿ ವಿಭಾಗಸಿಕೊಂಡೆ. ಎಲ್ಲ ವಿಷಯಗಳನ್ನೂ ಒಂದು ತಿಂಗಳಿಗೆ ಎಷ್ಟು ಸಾಧ್ಯವೋ ಅಷ್ಟು ಪರಿಪೂರ್ಣ ಮಾಡಿಕೊಳ್ಳಲು ಪ್ರಯತ್ನಿಸಿದೆ. ಈ ಒಂದು ತಿಂಗಳ ನನ್ನದೇ ಟೈಂ ಟೇಬಲ್‌ನಲ್ಲಿ ಮತ್ತೆ 15 ದಿನಗಳ ಎರಡು ಭಾಗ ಮಾಡಿದೆ. ಮೊದಲು ಓದಿ, ನಂತರ ಬರೆಯುವುದು, ರಿವಿಜನ್‌, ಪ್ರಶ್ನೆ ಪತ್ರಿಕೆ ಬಿಡಿಸುವುದು; ಹೀಗೆ ಆಯಾ ತಿಂಗಳ ಪಠ್ಯಗಳನ್ನು ಆಯಾ ತಿಂಗಳೇ ಪೂರ್ಣವಾಗಿ ಅರಿತುಕೊಳ್ಳುತ್ತಿದ್ದೆ. ಇದು ವಾರ್ಷಿಕ ಪರೀಕ್ಷೆ ಹತ್ತಿರ ಬಂದಾಗ ಒತ್ತಡ ನಿವಾರಣೆಗೆ ಸಹಕಾರಿ ಆಯಿತು.

ಸಂಜೆ 4ಕ್ಕೆ ಕಾಲೇಜು ಮುಗಿಯುತ್ತಿದ್ದಂತೆ ಹಾಸ್ಟೆಲ್‌ಗೆ ಹೋಗುತ್ತಿದ್ದೆ. ಕೆಲ ಹೊತ್ತು ಓರಿಗೆಯವರ ಜೊತೆ ಮಾತು, ಹರಟೆ ಮುಗಿಸಿ ಓದಲು ಶುರು ಮಾಡುತ್ತಿದ್ದೆ. ತಡರಾತ್ರಿಯವರೆಗೂ ನಿದ್ದೆಗೆಟ್ಟು ಓದುವ ಅಭ್ಯಾಸ ನನಗಿಲ್ಲ. ಪಠ್ಯಕ್ರಮ ಹಾಗೂ ಪ್ರಾಯೋಗಿಕ ವಿಧಾನಗಳನ್ನು ತಿಂಗಳಿಗೆ ಸಾಲುವಂತೆ ಹೊಂದಿಸಿಕೊಂಡಿದ್ದರಿಂದ ಸುಲಭವಾಯಿತು. ಇಂದು ಓದಿ– ಬರೆದ ವಿಷಯವನ್ನೇ ನಾಳಿನ ವಿಷಯ ಕೈಗೆತ್ತಿಕೊಳ್ಳುವ ಮುನ್ನ ಮತ್ತೆ ರಿವಿಜನ್‌ ಮಾಡುತ್ತಿದ್ದೆ.

ವಿಜಯಲಕ್ಷ್ಮಿ ಭಜಂತ್ರಿ

(ಪಿಯುಸಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಕಲಬುರ್ಗಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದವರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT