ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್ ಗೋಲ್ಡ್‌: ₹30 ಲಕ್ಷ ಶಿಷ್ಯ ವೇತನ ವಿತರಣೆ

Last Updated 29 ಸೆಪ್ಟೆಂಬರ್ 2022, 6:30 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಕಲಬುರಗಿ ಶಾಖೆಯ ಮಲಬಾರ್ ಟ್ರಸ್ಟ್ ವತಿಯಿಂದ ಜಿಲ್ಲೆಯ 340 ವಿದ್ಯಾರ್ಥಿನಿಯರಿಗೆ ₹30.25 ಲಕ್ಷ ಮೊತ್ತದ ಶಿಷ್ಯ ವೇತನದ ಚೆಕ್‌ಗಳನ್ನು ವಿತರಿಸಲಾಯಿತು.

ಕಲ್ಯಾಣ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಖೆಯ ನಿರ್ದೇಶಕ ಮನಸೂರ್ ಕೆ. ಆಶೀಕ್, ‘ಉದ್ಯಮದ ಆದಾಯದಲ್ಲಿ ಶೇ 2ರಷ್ಟು ಲಾಭಾಂಶವನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗೆ(ಸಿಎಸ್‌ಆರ್‌) ವಿನಿಯೋಗಿಸಬೇಕು ಎಂಬ ನಿಯಮ ಇದೆ. ಆದರೆ, ನಾವು ಮಹಿಳಾ ಸಬಲೀಕರಣ, ವೈದ್ಯಕೀಯ ಶಿಕ್ಷಣ ಸೇರಿದಂತೆ ಇತರೆ ಕಾರ್ಯಗಳಿಗಾಗಿ ಶೇ 5ರಷ್ಟು ಲಾಭಾಂಶವನ್ನು ಖರ್ಚು ಮಾಡುತ್ತಿದ್ದೇವೆ’ ಎಂದರು.

‘ಕಳೆದ ವರ್ಷ ₹22 ಲಕ್ಷ ಮೊತ್ತವನ್ನು ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ನೀಡಿದ್ದೆವು. ಈ ವರ್ಷ ₹30.25 ಲಕ್ಷದಲ್ಲಿ 340 ವಿದ್ಯಾರ್ಥಿನಿಯರಿಗೆ ಶಿಷ್ಯ ವೇತನ ಕೊಟ್ಟಿದ್ದೇವೆ. ಜಿಲ್ಲೆಯ ಜನರು ಇದೇ ರೀತಿಯ ಸಹಕಾರ ನೀಡಿದರೆ ಮುಂದಿನ ವರ್ಷ ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಶಿಷ್ಯ ವೇತನ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಮಾತನಾಡಿ, ‘ಓದಿದ ಎಲ್ಲರಿಗೂ ಸರ್ಕಾರಗಳೇ ಉದ್ಯೋಗ ಕೊಡಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಖಾಸಗಿ ಕಂಪನಿಗಳು ಉದ್ಯಮಗಳನ್ನು ಸ್ಥಾಪಿಸಿ ಶಿಕ್ಷಿತರಿಗೆ ಕೆಲಸ ಕೊಡುತ್ತಿವೆ. ಇದರಿಂದ ನೌಕರರು ತಮ್ಮ ಕುಟುಂಬಗಳ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.

‘ದೇಶದ ಹಲವು ಕಂಪನಿಗಳು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿವೆ. ಅದರಲ್ಲಿ ಎಷ್ಟು ಮೊತ್ತದ ಲಾಭಾಂಶವನ್ನು ಸಮಾಜ ಮುಖಿ ಕೆಲಸಗಳಿಗೆ ವಿನಿಯೋಗಿಸುತ್ತಿವೆ ಎಂಬುದನ್ನು ನಾವು ಪ್ರಶ್ನಿಸಬೇಕಿದೆ’ ಎಂದು ಹೇಳಿದರು.

ಶೇ 80ಕ್ಕೂ ಕಡಿಮೆ ಪ್ರತಿಶತ ಅಂಕಪಡೆದವರಿಗೆ ₹8 ಸಾವಿರ ಹಾಗೂ ಇದಕ್ಕೂ ಹೆಚ್ಚು ಅಂಕ ಪಡೆದವರಿಗೆ ₹10 ಸಾವಿರ ವಿದ್ಯಾರ್ಥಿನಿ ವೇತನ ಕೊಡಲಾಯಿತು. ಶಾಖೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಅಬ್ಬುಲ್ ಗಫುರ್, ಪ್ರಾಂಶುಪಾಲರಾದ ದೇವನಗೌಡ, ಪ್ರಭಾವತಿ ಪಾಟೀಲ, ರಾಜು ಗಂಗಾಧರ, ಶ್ರೀಶೈಲಪ್ಪ ಬನಾಳೆ, ಸಮಿನ್ ಸುಲ್ತಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT