ಆತ್ಮಹತ್ಯೆಗೆ ಶರಣಾದ ಯುವಕನ್ನು ಮಹೇಶ ಮಾರುತಿ ರೇಖುಳಗಿ (27) ಎಂದು ಗುರುತಿಸಲಾಗಿದೆ. ಮೂಲತಃ ಬೀದರ್ ಜಿಲ್ಲೆಯ ರೇಕುಳಗಿ ಗ್ರಾಮದ ಮಹೇಶ ಪತ್ನಿಯ ತವರು ಮನೆ ಫತೆಪುರದಲ್ಲಿ ನೆಲೆಸಿದ್ದನು. ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಆತ ಡೀಸೆಲ್ ತರಲೆಂದು ಬಂದಿದ್ದರು. ಕ್ಯಾನ್‌ನಲ್ಲಿ ಡೀಸೆಲ್ ತುಂಬಿಕೊಂಡು ಬಂದ ಆತ ಫತೆಪುರ ಕ್ರಾಸ್ ಬಳಿ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟುಹೋಗಿದ್ದಾನೆ. ಮಾಹಿತಿ ತಿಳಿದು ಸಬ್ ಇನ್‌ಸ್ಪೆಕ್ಟರ್ ಗಂಗಮ್ಮ ಜಿನಿಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.