ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಶಾಳ– ಕಲಬುರಗಿ ನೇರ ಬಸ್ ಸೌಲಭ್ಯ

Published 1 ಜನವರಿ 2024, 15:55 IST
Last Updated 1 ಜನವರಿ 2024, 15:55 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಮಾಶಾಳದಿಂದ ಕಲಬುರಗಿವರೆಗೆ ನೇರ್‌ ಬಸ್‌ ವ್ಯವಸ್ಥೆ ಕಲ್ಪಿಸಿರುವುದರಿಂದ ಸೋಮವಾರ ಮಾಶಾಳದಲ್ಲಿ ಕಸಾಪ ವಲಯ ಅಧ್ಯಕ್ಷ ಬಾಬುಮಿಯ್ಯಾ ಫುಲಾರಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನಿಸಿ ಗ್ರಾಮಸ್ಥರಿಂದ ಅಭಿನಂದಿಸಿದರು.

ಬಳಿಕ ಮಾತನಾಡಿದ ಅವರು,‘ಮಾಶಾಳದಿಂದ ಕಲಬುರಗಿಗೆ ಹೋಗಬೇಕಾದರೆ ಬಹಳ ಸಮಸ್ಯೆ ಆಗಿತ್ತು. ನೇರವಾಗಿ ಬಸ್ ವ್ಯವಸ್ಥೆ ಇರಲಿಲ್ಲ. ಸೌಕರ್ಯ ಕಲ್ಪಿಸಿರುವುದು ಬಹಳ ಅನುಕೂಲವಾಗಲಿದೆ. ಕಲಬುರಗಿಯಿಂದ ಗ್ರಾಮಕ್ಕೆ ಸಂಜೆ 6ಗಂಟೆಗೆ ಬಸ್ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ಬಸ್‌ಗೆ ಪೂಜೆ ಸಲ್ಲಿಸಿ ನಂತರ ಚಾಲಕ ನಿರ್ವಾಹಕರಿಗೆ ಸನ್ಮಾನಿಸಲಾಯಿತು. ಅನಿಲ್‌, ಅಪ್ಪಾಸಾಬ್‌ ಮಾಕಾಮ, ಭೀಮ್‌ ಗನ್ನಾಪೂರ, ಮಹೇಶ ಸಲಗರ, ಶಿವಲಿಂಗ ಅಂಕದ, ಸುನಿಲ್‌ ಹಂಚಿನಾಳ, ಶರಣು ಉಪ್ಪಿನ್, ಚಿದಾನಂದ, ಶರಣು ಸಲಗರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT