ಮಂಗಳವಾರ, ಅಕ್ಟೋಬರ್ 26, 2021
20 °C

ಈದ್‌ ಮಿಲಾದುನ್ನಬೀ ಮೆರವಣಿಗೆಗೆ ಅನುಮತಿ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಅ. 19ರಂದು ಆಚರಿಸಲಾಗುವ ಈದ್‌ ಮಿಲಾದುನ್ನಬೀ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಸಲು ಅನುಮತಿ ಕೊಡಬೇಕು’ ಎಂದು ಇಲ್ಲಿನ ಮರ್ಕಜ್‌ ಸೀರತ್‌ ಕಮಿಟಿ ಜಿಲ್ಲಾ ಘಟಕದಿಂದ ನಗರ ಪೊಲೀಸ್‌ ಕಮಿಷನರ್‌ ಡಾ.ವೈಎಸ್‌. ರವಿಕುಮಾರ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಈ  ಬಗ್ಗೆ ಸಮಾಜದ ಮುಖಂಡರು ನಗರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು.

‍ಪ್ರವಾದಿ ಮಹಮ್ಮದ್‌ ಅವರ ಜನ್ಮದಿನದ ಅಂಗವಾಗಿ ಅಂದು ಸಂಜೆ 5ಕ್ಕೆ ನಗರದ ಮುಸ್ಲಿಂ ಚೌಕ್‌ದಿಂದ ಸ್ತಬ್ದಚಿತ್ರಗಳ ಮೆರವಣಿಗೆ ಆರಂಭಿಸಲಾಗುವುದು. ಮಿಜಗುರಿ, ಗಂಜ್‌, ಸೂಪರ್‌ ಮಾರ್ಕೆಟ್‌, ಹಳೆಚೌಕ್‌ ಪೊಲೀಸ್‌ ಠಾಣೆ, ಚಪ್ಪಲ್‌ ಬಜಾರ್, ಗಣೇಶ ಮಂದಿರ, ಬಹಮನಿ ಚೌಕ್‌ ಮೂಲಕ ಮೆರವಣಿಗೆ ನಡೆಯಲಿದೆ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆಯೂ ಮುಖಂಡರು ಚರ್ಚಿಸಿದರು.

ಈ ಆಚರಣೆ ವೇಳೆ ಕೋವಿಡ್‌ನ ಎಲ್ಲ ರೀತಿಯ ಮಾರ್ಗಸೂಚಿಗಳನ್ನೂ ಪಾಲಿಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸುವುದು ಕೂಡ ಕಡ್ಡಾಯ ಎಂದೂ ಮುಖಂಡರು ಮಾಹಿತಿ ನೀಡಿದರು.

ಸಮಿತಿ ಕಾರ್ಯಾಧ್ಯಕ್ಷ ಮೊಹಮದ್‌ ಅಸಗರ ಚುಲ್‌ಬುಲ್, ಅಬ್ದುಲ್‌ ಖದೀರ್‌ ಚೊಂಗೆ, ಅಬ್ದುಲ್‌ ರಹೀಮ್‌ ಮಿರ್ಚಿ, ಓಸ್ಮಾನ್‌ ಅಲಿ ಗುತ್ತೇದಾರ ಮುಂತಾದವರು ಸಭೆಯಲ್ಲಿ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು