ಭಾನುವಾರ, ಅಕ್ಟೋಬರ್ 25, 2020
21 °C

ಸಂಗೀತ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಹತ್ತು ವರ್ಷಗಳಿಂದ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಸಂಗೀತ ಕಲಿತವರು ನಿರುದ್ಯೋಗಿಗಳಾಗಿದ್ದು, ಮನೆ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಕೂಡಲೇ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಸಂಗೀತ ಶಿಕ್ಷಕರ ನೇಮಕಾತಿ ಸಮಿತಿ ಸದಸ್ಯರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿ ಸಂಸ್ಥಾಪಕ ಬಂಡಯ್ಯ ಸ್ವಾಮಿ ಸುಂಟನೂರ, ಅಣ್ಣಾರಾವ ಮತ್ತಿಮುಡ, ಬಾಬುರಾವ್ ಕೂಬಾಳ, ಹಿರಿಯ ಕಲಾವಿದ ಸಿದ್ದಣ್ಣ ದೇಸಾಯಿಕಲ್ಲೂರ, ಶಿವಕುಮಾರ್ ಜಾಲಹಳ್ಳಿ, ಜಗದೀಶ್ ದೇಸಾಯಿಕಲ್ಲೂರ, ರೇವಣ್ಣಯ್ಯ ಸುಂಟನೂರ, ವೀರಭದ್ರಯ್ಯ ಸ್ಥಾವರಮಠ ಸಚಿವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು