ಶುಕ್ರವಾರ, ಜುಲೈ 1, 2022
27 °C

ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆ ಅಪಾಯಕಾರಿ: ಶಾಸಕ ಪ್ರಿಯಾಂಕ್‌ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ‘ರಾಜಕಾರಣಿಗೆ ಜೈಕಾರ, ಸನ್ಮಾನ, ಮೆರವಣಿಗೆ ಮಾಡುವುದರಿಂದ ಸರ್ವಾಧಿಕಾರಿ ಧೋರಣೆ ತಾಳುತ್ತಾನೆ. ವ್ಯಕ್ತಿ ಪೂಜೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಮಾಜಿ ಸಚಿವ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.

ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್‌ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

2ನೇ ಮಹಾಯುದ್ಧದ ನಂತರ ಭಾರತ ಸೇರಿದಂತೆ ಸ್ವಾತಂತ್ರ್ಯಗೊಂಡ 35 ದೇಶಗಳು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದವು. 75 ವರ್ಷಗಳ ನಂತರ 34 ದೇಶಗಳಲ್ಲಿ ನಿರಂಕುಶ ಪ್ರಭುತ್ವ, ಮಿಲಿಟರಿ ಆಡಳಿತ ಇನ್ನು ಕೆಲವು ಬೇರೆ ದೇಶಗಳಲ್ಲಿ ವಿಲೀನಗೊಂಡಿವೆ. ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವ ಉಳಿದುಕೊಂಡಿದೆ. ಇದಕ್ಕೆ ಕಾರಣ ಅಂಬೇಡ್ಕರ್‌ ಅವರ ಸಂವಿಧಾನ ಎಂದು ಹೇಳಿದರು.

ನಮ್ಮ ಮಕ್ಕಳು ಎಲ್ಲಿ ಓದುತ್ತಾರೊ ನನ್ನ ಚಿತ್ತಾಪುರ ಕ್ಷೇತ್ರದ ಮಕ್ಕಳಿಗೂ ಅದೇ ಭವಿಷ್ಯ ಕೊಡಬೇಕು ಎಂಬುದು ನನ್ನ ವಿಚಾರ, ಸಾವಿರಾರು ಕೋಟಿ ಖರ್ಚು ಮಾಡಿದ್ದೇನೆ. ವಿದೇಶದಲ್ಲಿ ಶಿಕ್ಷಣ ಪಡೆಯಲೆಂದು ಪ್ರಬುದ್ಧ ಯೋಜನೆ ಆರಂಭಿಸಿದ್ದೇನೆ. ಇಂದು ನಮ್ಮ ಕ್ಷೇತ್ರದ ಬಡ ಮಕ್ಕಳು ಜರ್ಮನಿಯಲ್ಲಿ ನೋಬೆಲ್ ಪ್ರಶಸ್ತಿ ಪಡೆದವರ ಜತೆ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಸಂಕಲ್ಪ ಎಂದು ತಿಳಿಸಿದರು.

ಉಪನ್ಯಾಸಕ ಸಂಜಯ ಮಾಕಲ್‌ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್‌, ವಿಜಯಕಯಮಾರ ಜಿ.ರಾಮಕೃಷ್ಣ, ತಹಶೀಲ್ದಾರ್ ಸುರೇಶ ವರ್ಮಾ, ಗುಲಬರ್ಗಾ ವಿಶ್ವವಿದ್ಯಾಲಯ ಮೌಲ್ಯ ಮಾಪನ ಕುಲಸಚಿವೆ ಡಾ.ಮೇಧಾವಿನ ಎಸ್‌.ಕಟ್ಟಿ, ಗುರು ಮಾಟೂರ, ಬಸವರಾಜ ಪಾಟೀಲ, ರವಿ ಚೌವಾಣ್‌, ಡಾ. ರಮೇಶ ಪೋತೆ, ನಿಂಗಪ್ಪ ಪ್ರಬುದ್ಧಕರ್, ಶರಣು ಗೌರೆ, ಜಗದೇವಪ್ಪ ಅಂಕಲಗಿ, ಸುಭಾಷ ಕೋರೆ, ಪ್ರಕಾಶ ಹಾಗರಗಿ, ಹಣಂತ ಹರಸೂರ, ತಯ್ಯಬ್‌ ಚೌದ್ರಿ, ಶ್ರೀಕಾಂತ ಕಾಂಬಳೆ, ಸುರೇಶ ಭರಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು