ಗುರುವಾರ , ಅಕ್ಟೋಬರ್ 29, 2020
22 °C

ನೆರೆ ಪೀಡಿತ ಗ್ರಾಮಗಳಿಗೆ ಶಾಸಕ ಅಜಯಸಿಂಗ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ‌ಭೀಮಾ ನದಿ ದಡದಲ್ಲಿರುವ ತಾಲ್ಲೂಕಿನ ಹಲವು ಗ್ರಾಮಗಳಿಗೆ ಶಾಸಕ ಅಜಯಸಿಂಗ್ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು.

ನೆಲೋಗಿ ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯ ಮಾಹೂರ, ಕೂಡ್ಲಿಗಿ, ಬಳ್ಳುಂಡಗಿ, ರಾಸಣಗಿ, ಹರವಾಳ, ಬಣಮಿ, ಕೋನಾಹಿಪ್ಪರಗಿ, ಕೋಬಾಳ, ಹಂದನೂರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ, ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ಒದಗಿಸುವ ಭರವಸೆ ನೀಡಿದರು.

ನಂತರ ಮಾತನಾಡಿದ ಅವರು, ಭೀಮಾನದಿಗೆ ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಹರಿಸಿದ್ದರಿಂದ ರದ್ದೇವಾಡಗಿ, ಮಾಹೂರ, ಮಂದ್ರವಾಡ, ಕೋಬಾಳ ಗ್ರಾಮಗಳು ಸೇರಿದಂತೆ 30 ಹಳ್ಳಿಗಳು ಜಲಾವೃತಗೊಂಡಿದ್ದರಿಂದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ತಾಲ್ಲೂಕಿನಲ್ಲಿ ಅಂದಾಜು 400 ಹೆಕ್ಟೇರ್ ತೋಟಗಾರಿಕೆ ಮತ್ತು 80 ಸಾವಿರ ಹೆಕ್ಟೇರ್ ಕೃಷಿ ಬೆಳೆಗಳು ಹಾನಿಯಾಗಿವೆ. 800ಕ್ಕೂ ಅಧಿಕ ಮನೆಗಳು ಕುಸಿದಿವೆ. ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಸಿದರಾಯ ಭೋಸಗಿ, ಮುಖಂಡರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಶಿವಣ್ಣಗೌಡ ಪಾಟೀಲ ಮಂದ್ರವಾಡ, ಮಹಿಬೂಬಪಟೇಲ ಕೋಬಾಳ, ಬಾಷಾ ಪಟೇಲ ಬಣಮಿ, ಶಿವಶರಣಪ್ಪ ಕೋಬಾಳ, ನಬಿಸಾಬ, ರುಕುಂ ಪಟೇಲ ಕೂಡಿ, ಮೀರಾ ಪಟೇಲ, ಮೈಲಾರಿ ಬಣಮಿ, ಕಾಶಿಂ ಕೋಬಾಳ, ಬಸಣ್ಣಗೌಡ ಹಂದನೂರ, ಬಹಾದ್ದೂರ ರಾಠೋಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.