ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ವಿಪತ್ತು ನಿರ್ವಹಣೆ: ಅಣಕು ಪ್ರದರ್ಶನ

ಕೈಗಾರಿಕೆ, ಅನಿಲ ಘಟಕಗಳ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ: ಭೀಮಾಶಂಕರ ತೆಗ್ಗಳ್ಳಿ
Last Updated 30 ಜುಲೈ 2022, 4:26 IST
ಅಕ್ಷರ ಗಾತ್ರ

ಕಲಬುರಗಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ನಗರ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಘಟಕದಲ್ಲಿ ಶುಕ್ರವಾರ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತು ಅಣಕು ಕಾರ್ಯಾಚರಣೆ ನಡೆಯಿತು.

ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿನಂದೂರ ಬಳಿಯ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಬೀಡುಬಿಟ್ಟಿದ್ದರು. ಘಟಕದಲ್ಲಿ ಎಚ್ಚರಿಕೆ ಘಂಟೆ ಮೊಳಗಿದ ತಕ್ಷಣ ಅವರಿಗೆ ಕರೆ ಮಾಡಿ ತಿಳಿಸಲಾಯಿತು. ಬಳಿಕ ವಾಹನಗಳ ಸಹಿತ ಅವರು ಘಟಕದೆಡೆಗೆ ಬಂದರು.

3ಅಗ್ನಿಶಾಮಕ ವಾಹನ, 6 ಆಂಬುಲೆನ್ಸ್‌, ತಲಾ 10 ಜನ ಸದಸ್ಯರಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ 2 ತಂಡ, 25 ಸದಸ್ಯರಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ
ಯುನೈಟೆಡ್‌ ಸ್ಪಿರಿಟ್ಸ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಅಣ ಕು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕೈಗಾರಿಕೆಗಳು ಹಾಗೂ ರಾಸಾಯನಿಕ ಘಟಕಗಳಲ್ಲಿ ರಾಸಾಯನಿಕ ಸೋರಿಕೆ ಯಾಗಿ ವಿಪತ್ತು ಸಂಭವಿಸಿದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆಯ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ವಿಧಾನಗಳನ್ನು ತೋರಿಸಿಕೊಟ್ಟರು.ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯವರು ಅವಘಡದಲ್ಲಿ ಸಿಲುಕಿದ ಕಾರ್ಮಿಕರು ಹಾಗೂ ಜನರನ್ನು ರಕ್ಷಿಸುವ ವಿಧಾನಗಳನ್ನು ಪ್ರದರ್ಶಿಸಿದರು.
ಅವರಿಗೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಘಟಕದವರೂ ಸಾ ಥ್‌ ನೀಡಿದರು.

ಘಟಕದಲ್ಲಿಯ ಒಂದು ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅದು ಘಟಕದ ತುಂಬಾ ವ್ಯಾಪಿಸಿದೆ ಎಂದು ಕಲ್ಪಿಸಿಕೊಂಡು ಅಲ್ಲಿಯ ಪಂಪ್‌ ಹೌಸ್ ಹಾಗೂ ಅಗ್ನಿ ಶಾಮಕ
ಸಿಬ್ಬಂದಿ ಟ್ಯಾಂಕ್‌ಗೆ ನೀರು ಸಿಂಪಡಿಸಿದರು. ಕಾರ್ಮಿಕರು ಮೈ, ಮುಖಕ್ಕೆ ಮಸಿ ಹಾಗೂ
ರಕ್ತ ಹೋಲುವ ಬಣ್ಣ ಬಳಿದುಕೊಂಡಿದ್ದರು. ಅವರನ್ನು ಬ್ಯಾಟರಿ ಚಾಲಿತ ಬಗ್ಗಿ
ವಾಹನ ಹಾಗೂ ಸ್ಟ್ರೆಚರ್ ಮೇಲೆ ತೆಗೆದುಕೊಂಡು ಹೋಗಿ ರಕ್ಷಿಸುವಂತೆ ತೋರಿಸಲಾಯಿತು. ಬಳಿಕ ಆಂಬುಲೆ ನ್ಸ್‌ನಲ್ಲಿ ಹತ್ತಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸಾ ವಿಧಾನಗಳನ್ನು ತೋರಿಸಿಕೊಟ್ಟರು.

ಅಣಕು ಕಾರ್ಯಾಚರಣೆ ಕಾರಣಕ್ಕೆ ಪೊಲೀಸರು ಹಾಗೂ ಘಟಕದ ಭದ್ರತಾ ಸಿಬ್ಬಂದಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT