ಗುರುವಾರ , ಮೇ 6, 2021
27 °C

ಅವಘಡದಲ್ಲಿ ಗಾಯಗೊಂಡಿದ್ದ ಯುವಕನನ್ನು ರಕ್ಷಿಸಿದ ಸಂಸದ ಡಾ.ಜಾಧವ

‌ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ಕಮಲಾಪುರ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಮರ ಬಿದ್ದು ಗಾಯಗೊಂಡಿದ್ದ ಯುವಕನನ್ನು ಸಂಸದ ಡಾ.ಉಮೇಶ ಜಾಧವ ರಕ್ಷಿಸಿದರು.

ಸಂಸದರು ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಿಂದ ಮರಳಿ ಕಲಬುರ್ಗಿಗೆ ಬರುತ್ತಿದ್ದ ವೇಳೆ ಕಮಲಾಪುರ ಸಮೀಪ ದೊಡ್ಡ ಮರ ಬಿದ್ದು ಬೈಕ್‌ ಸವಾರ ಗಾಯಗೊಂಡಿದ್ದ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಂಸದರು ವಾಹನ ನಿಲ್ಲಿಸಿ ನೋಡಿದಾಗ ಯುವಕ ಗಾಯಗೊಂಡು ಒದ್ದಾಡುತ್ತಿದ್ದ. ತಮ್ಮಲ್ಲಿದ್ದ ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಬಳಸಿ ಉಪಚರಿಸಿದ ಜಾಧವ ಅವರು, ಆಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಸಾಗಿಸಿದರು.

ಪ್ರಯಾಣಿಕರ ಸಹಾಯ ಪಡೆದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಮರದಲ್ಲಿ ಕಟ್ಟಿಕೊಂಡಿದ್ದ ಜೇನು ನೊಣಗಳು ಸಂಸದರು ಹಾಗೂ ಅಲ್ಲಿದ್ದ ಜನರಿಗೆ ಕಚ್ಚಿ ಗಾಯಗಳಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು