ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಹಿಂದು ದೇವಾಲಯದ ಎದುರು ಮುಸ್ಲಿಂ ಕುಟುಂಬದ ಮದುವೆ

Published 11 ಫೆಬ್ರುವರಿ 2024, 16:09 IST
Last Updated 11 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ಮಾದನಹಿಪ್ಪರಗಿ ಗ್ರಾಮದ ಮುಸ್ಲಿಂ ಕುಟುಂಬದವರು, ಹಿಂದು ದೇವಾಲಯದ ಎದುರು ತಮ್ಮ ಪುತ್ರನ ಮದುವೆ ಮಾಡಿಸಿ, ಭಾವೈಕ್ಯತೆ ಮೆರೆದರು.

ಗ್ರಾಮದ ಖಂಡೇಶ್ವರ ದೇವಸ್ಥಾನದ ಎದುರು ಭಾನುವಾರ ಗ್ರಾಮದ ಮಹಿಬೂಬ್ ಅಹ್ಮದ್ ಹಾರಕೂಡ ಅವರ ಪುತ್ರ ಸಿಕಂದರ್‌ ಮದುವೆ ಸಂಭ್ರಮದಿಂದ ನೆರವೇರಿತು.

ಗ್ರಾಮದಲ್ಲಿ ನೂರಾರು ಮುಸ್ಲಿಂ ಸಮುದಾಯ ಮನೆಗಳಿವೆ. ಗ್ರಾಮದಲ್ಲಿರುವ ಎರಡು ದರ್ಗಾಗಳ ಎದುರು ಮದುವೆಗಳು ನಡೆಯುತ್ತಿದ್ದವು. ಆದರೆ ಮಹಿಬೂಬ್ ಹಾರಕೂಡ ಅವರು ದರ್ಗಾ ಮುಂದೆ ಮದುವೆ ಮಾಡಿಸದೆ ಹಿಂದು ಸಮಾಜದವರೊಂದಿಗೆ ಸೇರಿ ಖಂಡೇಶ್ವರನ ಪಾದಕೆ ಎದುರು ‍ಪುತ್ರನ ಮದುವೆ ಮಾಡಿದರು. ಮದುವೆ ಶಾಸ್ತ್ರವೊಂದು ಮುಸ್ಲಿಂ ಧರ್ಮದ ಪ್ರಕಾರ ನಡೆಯಿತು.

ಮದುವೆಯಲ್ಲಿ ಜವೆಗೋದಿ ಹುಗ್ಗಿ, ಉಳ್ಳಾಗಡ್ಡಿ ಚಟ್ನಿ, ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರು ಮತ್ತು ಮಜ್ಜಿಗೆ ಬಂಧುಗಳು ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT