ಕಲಬುರಗಿ: ‘ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಾತನಾಡುವಾಗ ನಿಮ್ಮನ್ನು ತಡೆಯುವ ಶಕ್ತಿ ನಮಗೆ ಇದ್ದು, ಕಾಂಗ್ರೆಸ್‌ನ ಇತಿಹಾಸ ಬೇರೆಯೇ ಇದೆ. ಎಷ್ಟೆಲ್ಲಾ ರಣಾಂಗಣ ಎದುರಿಸಿದ್ದೇವೆ. ತಾಳ್ಮೆ ಮೀರಿದರೆ ಬಿಜೆಪಿಯವರು ಓಡಾಡಲು ಆಗುವುದಿಲ್ಲ ಎಂದಿದ್ದಾರೆ. ಹೀಗಾಗಿ, ಅವರ ಕ್ರಿಯೆಗೆ ನಮ್ಮವರೂ ಪ್ರತಿಕ್ರಿಯೆ ಕೊಟ್ಟಿದ್ದಾರೆ’ ಎಂದುವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸ್ಪಷ್ಟನೆ ನೀಡಿದರು.

‘ನಮ್ಮ ಕಾರ್ಯಕರ್ತರು ಶೂಟ್ ಅಥವಾ ಬೇರೆ ಪದಗಳನ್ನು ಬಳಸಿದ್ದಾರೆ. ಅವರು ಮನಸ್ಸಿನಲ್ಲಿ ಯಾವ ಶೂಟ್ ಎಂಬುದು ಇತ್ತೋ ನನಗೆ ಗೊತ್ತಿಲ್ಲ. ಬೇರೆ ತರಹದ ಶೂಟ್ ಇರಬಹುದು. ಅವರ ಪ್ರತಿಕ್ರಿಯೆಗೆ ನಮ್ಮವರೂ ಉತ್ತರಿಸಿದ್ದಾರೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಪ್ರಜಾಸತಾತ್ಮಕ ನೆಲೆಯಲ್ಲಿ ಎಲ್ಲರೂ ರಾಜಕೀಯ ಮಾಡಬೇಕು’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಿಯಾಂಕ್ ಅವರು ಸೋಲುವ ಹತಾಶೆಯಿಂದ ಮಾತನಾಡುವ ಬದಲು ತಮ್ಮ ತಂದೆಯಂತೆ ಮುತ್ಸದ್ದಿತನ ತೋರಬೇಕು. ಹಿಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಲು ಪ್ರಿಯಾಂಕ್ ಕಾರಣ. ಸ್ವಯಂಕೃತ ತಪ್ಪಿನಿಂದಲೇ ಪ್ರಿಯಾಂಕ್ ಸೋಲುವರು. ಅವರನ್ನು ಸೋಲಿಸುವುದೇ ನಮ್ಮ ಧ್ಯೇಯ’ ಎಂದರು. ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.