ಭಾನುವಾರ, ಜುಲೈ 3, 2022
24 °C

ನಾಲವಾರ ಕೋರಿಸಿದ್ದೇಶ್ವರ ಜಾತ್ರೆ ರದ್ದು; ತಹಶೀಲ್ದಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಲವಾರ (ವಾಡಿ): ನಾಲವಾರದಲ್ಲಿ ಫೆ.11 ಮತ್ತು 12ರಂದು ನಡೆಯಬೇಕಿದ್ದ ಕೋರಿಸಿದ್ದೇಶ್ವರ ಜಾತ್ರೆಯನ್ನು ಕೊರೊನಾ ಕಾರಣ ರದ್ದುಗೊಳಿಸಲಾಗಿದೆ ಎಂದು ತಹಶೀಲ್ದಾರ್ ಆಕಾಶಕುಮಾರ ತಿಳಿಸಿದ್ದಾರೆ.

ಜಾತ್ರೆ ನಿಮಿತ್ತ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಗುರುವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಗರ್ಭಗುಡಿಯಲ್ಲಿ ಕೆಲವೇ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಪೂಜಾ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದೆ ಎಂದರು.

ಸಿಪಿಐ ಕೃಷ್ಣಪ್ಪ ಕಲ್ಲದೇವರು ಮಾತನಾಡಿ, ಜಾತ್ರೆ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಠದ ಆವರಣದಲ್ಲಿ ಮಳಿಗೆ ಹಾಕಲು ಅವಕಾಶವಿಲ್ಲ ಎಂದರು.

ಮಠದ ಪೀಠಾಧಿಪತಿ ಡಾ.ಸಿದ್ದತೋಟೇಂದ್ರ ಶಿವಾಚಾರ್ಯರು ಮಾತನಾಡಿ, ಭಕ್ತರು ಮನೆಯಿಂದಲೇ ಪೂಜೆ ಸಲ್ಲಿಸಬೇಕು. ಕೊರೊನಾ ತಡೆಗೆ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಭಕ್ತರ ಆರೋಗ್ಯದ ದೃಷ್ಟಿಯಿಂದ ಜಾತ್ರೆ ರದ್ದುಪಡಿಸಲಾಗಿದೆ ಎಂದರು.

ದ್ವಿದಳ ದಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿಗೌಡ, ಸ್ಥಳೀಯ ಪಿಎಸ್ಐ ವಿಜಯಕುಮಾರ ಭಾವಗಿ, ವೀರಣ್ಣಗೌಡ ಪರಸರೆಡ್ಡಿ, ಭೀಮರೆಡ್ಡಿಗೌಡ ಕುರಾಳ, ಶಿವಕುಮಾರ ಸುಣಗಾರಿ ಚಂದ್ರಶೇಖರ ಲೇವಡಿ, ಗುರುಗೌಡ ಇಟಗಿ, ಮಹಾದೇವ ಗಂವ್ಹಾರ, ಸಿದ್ದುಗೌಡ ಸೀರಾ, ಪೊಲೀಸ್ ಸಿಬ್ಬಂದಿ ದೊಡ್ಡಪ್ಪ ಪೂಜಾರಿ, ಅಶೋಕ ಮೇತ್ರೆ, ಮಧುಕರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.