ಭಾನುವಾರ, ಅಕ್ಟೋಬರ್ 24, 2021
21 °C
ಸೇವೆ ಮತ್ತು ಸಮರ್ಪಣೆ ಅಭಿಯಾನದಲ್ಲಿ ಕ್ಯಾ. ಗಣೇಶ ಕಾರ್ಣಿಕ್

ರಾಷ್ಟ್ರ ಮೊದಲು ಎಂದ ಪ್ರಥಮ ನಾಯಕ ನರೇಂದ್ರ ಮೋದಿ: ಕ್ಯಾ. ಗಣೇಶ್ ಕಾರ್ಣಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರದ ಹಿತಾಸಕ್ತಿಯೇ ಮೊದಲು ಎಂದ ಪ್ರಥಮ ನಾಯಕ ನರೇಂದ್ರ ಮೋದಿ ಅವರಾಗಿದ್ದಾರೆ. ಹಾಗಾಗಿ,  ಏಳು ವರ್ಷಗಳಲ್ಲಿ ಒಂದೂ ಭ್ರಷ್ಟಾಚಾರದ ಕಳಂಕವಿಲ್ಲದಂತೆ ದೇಶವನ್ನು ಅಭಿವೃದ್ಧಪಥದತ್ತ ಮುನ್ನಡೆಸುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್‌ ಪ್ರತಿಪಾದಿಸಿದರು.

ಬಿಜೆಪಿ ವತಿಯಿಂದ ಗುರುವಾರ ಇಲ್ಲಿನ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಸೇವೆ ಮತ್ತು ಸಮರ್ಪಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ ಅವರು ದೇಶಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ವಿದೇಶಗಳೊಂದಿಗಿನ ಸಂಬಂಧ ಸುಧಾರಿಸಿದೆ. ಭಯೋತ್ಪಾದಕರನ್ನು ಮಟ್ಟ ಹಾಕಿದ್ದಾರೆ. ನವದೆಹಲಿಯಿಂದ ಬೀಜಿಂಗ್‌ವರೆಗೆ ತಲುಪಬಲ್ಲ ಖಂಡಾಂತರ ಕ್ಷಿಪಣಿಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದಾರೆ’ ಎಂದು ಅವರು ಹೇಳಿದರು.

ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ ದೇಶಗಳು ಸದಸ್ಯರಾಗಿರುವ ಕ್ವಾಡ್‌ನ ನೇತೃತ್ವವನ್ನು ಭಾರತವೇ ವಹಿಸಿಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಹಲವು ಅಂತರರಾಷ್ಟ್ರೀಯ ಒಕ್ಕೂಟಗಳಿಗೆ ಭಾರತ ನಾಯಕತ್ವ ನೀಡಿದೆ. ಇದಕ್ಕೆಲ್ಲ ಮೋದಿ ಅವರು ಅಹರ್ನಿಶಿ ಶ್ರಮವೇ ಕಾರಣವಾಗಿದೆ. ಸರಳ ಜೀವನಕ್ಕೆ ಹೆಸರಾದ ಮೋದಿ ಅವರು ಇತ್ತೀಚೆಗೆ ಅಮೆರಿಕದ ಮೂರು ದಿನಗಳ ಪ್ರವಾಸದಿಂದ ವಾಪಸಾದ ಬಳಿಕ ರಾತ್ರಿಯೇ ನೂತನ ಸೆಂಟ್ರಲ್ ವಿಸ್ಟಾ ಕಟ್ಟಡದ ಪ್ರಗತಿ ಪರಿಶೀಲನೆ ನಡೆಸಿದರು. ಅವರ ತಾಯಿ ಗುಜರಾತ್‌ನಲ್ಲಿ ಇಂದಿಗೂ ಅತ್ಯಂತ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ, ಶಶೀಲ್ ನಮೋಶಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಬಿಜೆಪಿ ನಗರ ಘಟಕದ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ, ಅಶೋಕ್ ಬಗಲಿ, ಲಿಂಗರಾಜ ಬಿರೆದಾರ, ನಾಗಪ್ಪ ಕೊಳ್ಳಿ, ಮಹಾದೇವ ಬೆಳಮಗಿ, ಸೂರಜ್ ತಿವಾರಿ, ಬಾಬುರಾವ್ ಹಾಗರಗುಂಡಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು