ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಂಥಾಲಯ ಡಿಜಿಟಲ್‌ ಸೇವೆಯಿಂದ ಅನುಕೂಲ: ಸುರೇಶ ಜಂಗೆ

ಸರ್ಕಾರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ
Published 24 ನವೆಂಬರ್ 2023, 14:54 IST
Last Updated 24 ನವೆಂಬರ್ 2023, 14:54 IST
ಅಕ್ಷರ ಗಾತ್ರ

ಕಲಬುರಗಿ: ‘ಗ್ರಂಥಾಲಯದ ಡಿಜಿಟಲ್‌ ಸೇವೆಗಳಿಂದ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ತ್ವರಿತವಾಗಿ ಹಾಗೂ ಸುಲಭವಾಗಿ ಸೇವೆ ದೊರಕುತ್ತದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕ ಸುರೇಶ ಜಂಗೆ ಹೇಳಿದರು.

ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಂಶುಪಾಲರಾದ ಪ್ರೊ.ಸವಿತಾ ತಿವಾರಿ ಮಾತನಾಡಿ, ‘ಉನ್ನತ ಶೈಕ್ಷಣಿಕ ಸಂಸ್ಥೆಗಳಿಗೆ ಗ್ರಂಥಾಲಯವು ಮಾಹಿತಿ ಹಾಗೂ ಜ್ಞಾನದ ಮೂಲವಾಗಿರುತ್ತದೆ’ ಎಂದು ಹೇಳಿದರು.

ಮಧ್ಯಪ್ರದೇಶದ ಅಮರಕಂಟಕ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಉಪ-ಗ್ರಂಥಪಾಲಕ ಶಂಕರರೆಡ್ಡಿ ಕೊಳ್ಳೆ, ಗ್ರಂಥಪಾಲಕ ವಿಜಯಕುಮಾರ ಗೋಪಾಲೆ ಮಾತನಾಡಿದರು.

ಮಹಾವಿದ್ಯಾಲಯ ಗ್ರಂಥಾಲಯದ ವಿವಿಧ ಸೇವೆಗಳನ್ನು ಕ್ಯೂಆರ್ ಕೋಡ್ ಮೂಲಕ ನೀಡಲು ತಯಾರಿಸಿದ ಕ್ಯೂಆರ್ ಕೋಡ್‌ ಹಾಗೂ ಮಹಾವಿದ್ಯಾಲಯದ ಚಟುವಟಿಕೆಗಳನ್ನು ಸಂಗ್ರಹಿಸಲು ಹಾಗೂ ಪ್ರಚುರಗೊಳಿಸಲು ಸಿದ್ಧಪಡಿಸಿದ ಯುಟ್ಯೂಬ್ ಚಾನೆಲ್ ಉದ್ಘಾಟಿಸಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ ಎಚ್‌.ಹೊಸಮನಿ, ಪರೀಕ್ಷಾ ನಿಯಂತ್ರಕ ಪ್ರಶಾಂತಕುಮಾರ ಎಂ., ಕಲಾ ವಿಭಾಗದ ಡೀನ್‌ ವಿಜಯಕುಮಾರ ಸಾಲಿಮನಿ, ವಾಣಿಜ್ಯ ವಿಭಾಗದ ಡೀನ್‌ ರಾಜಕುಮಾರ ಸಲಗರ, ವಿಜ್ಞಾನ ವಿಭಾಗದ ಡೀನ್‌ ವಿಜಯಕುಮಾರ ರಾಠೋಡ, ಸ್ನಾತಕೋತ್ತರ ವಿಭಾಗದ ಡೀನ್‌ ಮಲ್ಲೇಶಪ್ಪ ಕುಂಬಾರ, ಐಕ್ಯೂಎಸಿ ಸಂಚಾಲಕ ರಾಜಶೇಖರ ಮಡಿವಾಳ, ವಿಜಯಾನಂದ ವಿಠ್ಠಲರಾವ ಇದ್ದರು.

ಗ್ರಂಥಪಾಲಕಿ ರಾಬಿಯಾ ಇಫ್ಫತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲಭೀಮ ಸಾಗ್ಲಿ ನಿರೂಪಿಸಿದರು. ವಿಜಯಾನಂದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT