ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟೇಶ್ವರ ದೇವಸ್ಥಾನ: ನವರಾತ್ರಿ ಉತ್ಸವ ಸಂಪನ್ನ

Published 24 ಅಕ್ಟೋಬರ್ 2023, 16:28 IST
Last Updated 24 ಅಕ್ಟೋಬರ್ 2023, 16:28 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ನ್ಯೂ ರಾಘವೇಂದ್ರ ಕಾಲೊನಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಗಳು ಆಯುಧ ಪೂಜೆಯಂದು ಸಂಪನ್ನಗೊಂಡವು.

ಅ.15ರಿಂದ ಶುರುವಾದ 35ನೇ ನವರಾತ್ರಿಯ ಉತ್ಸವ ಅ.23ರ ವರೆಗೆ ವಿಜೃಂಭಣೆಯಿಂದ ಜರಗಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ 4ರಿಂದ ಪ್ರಾರಂಭಿಸಿ ತಡ ರಾತ್ರಿಯವರೆಗೂ ಪಾರಾಯಣ, ಭಜನೆ, ಮಂತ್ರ ಘೋಷ, ಜಯ ಘೋಷ, ಮಹಾಮಂಗಳಾರತಿ ನಡೆದವು.

‘ವೆಂಕಟೇಶ್ವರ ಭಗವಂತನು ಎಲ್ಲಾ ಭಕ್ತಾದಿಗಳಿಗೆ ಸುಖ, ಶಾಂತಿ ಮತ್ತು ನೆಮ್ಮದಿಗಳನ್ನು ನೀಡಲಿ’ ಎಂದು ಟ್ರಸ್ಟ್‌ ಅಧ್ಯಕ್ಷ ನಾರಾಯಣರಾವ ಕುಲಕರ್ಣಿ ಪ್ರಾರ್ಥಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಟ್ರಸ್ಟ್ ಪದಾಧಿಕಾರಿಗಳಾದ ಗೋವರ್ಧನರಾವ ದೇಶಪಾಂಡೆ, ವಿದ್ಯಾಸಾಗರ ಕುಲಕರ್ಣಿ, ಮೋಹನರಾವ ಚಿಮ್ಮನಚೋಡ, ಪಿ.ಎನ್.ಜೋಶಿ, ಶ್ರೀನಿವಾಸರಾವ ಸಿರಬೂರ, ನಾಗೇಶ ಸಿಂಧೆ, ಅರ್ಚಕರಾದ ಶ್ರೀನಿವಾಸಾಚಾರ್ಯ ಜೋಶಿ ನೆಲೋಗಿ, ಜಯತೀರ್ಥ, ಬಾಬಣ್ಣಾ ಮೈನಾಳ, ದೀಪಾ ಸಾವಳಗಿ, ಧನಂಜಯರಾವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT