‘ಮಾಹಿತಿ ತರಿಸಿಕೊಂಡು ಪ್ರಸ್ತಾವ ಸಲ್ಲಿಕೆ’
‘ಬಿಇಒ ಕಚೇರಿ ಸ್ಥಾಪನೆಗೆ ಅಗತ್ಯವಾದ ಮಾಹಿತಿಯನ್ನು ನೀಡುವಂತೆ ಎಲ್ಲಾ ಜಿಲ್ಲೆಗಳಿಗೆ ಸೂಚಿಸಲಾಗಿದೆ. ಅರ್ಥಶಾಸ್ತ್ರಜ್ಞೆ ಛಾಯಾ ದೇಗಾಂವಕರ್ ನೇತೃತ್ವದ ಶಿಕ್ಷಣ ತಜ್ಞರ ಸಮಿತಿ ಕೂಡ ಹೊಸ ಬಿಇಒ ಸ್ಥಾಪನೆಗೆ ಒಲವು ತೋರುತ್ತಿದೆ’ ಎಂದು ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೆಳಗಾವಿ ವಿಭಾಗದಲ್ಲಿ 59 ಬ್ಲಾಕ್‌ಗಳಿದ್ದರೆ ಕಲಬುರಗಿ ವ್ಯಾಪ್ತಿಯಲ್ಲಿ 34 ಬ್ಲಾಕ್‌ಗಳಿವೆ. ಅರ್ಧದಷ್ಟು ಕಚೇರಿಗಳ ಅಂತರವಿದೆ. ಇಂತಹದನ್ನು ಸರಿಪಡಿಸಬೇಕಿದೆ’ ಎಂದರು.