‘ಸಂಭ್ರಮಕ್ಕೆ ನೆಪ ಸಾಕು’ ಎಂಬ ಮಾತಿನಂತೆ ಸಾಕಷ್ಟು ಸಂಭ್ರಮದೊಂದಿಗೆ 2026ರನ್ನು ಸ್ವಾಗತಿಸಲಾಗಿದೆ. ‘ಹೊಸ ವರ್ಷ’ ಎಂಬುದು ಬರೀ ದಿನ ದಿನಾಂಕದ ಬದಲಲ್ಲ. ಅದು ನಮ್ಮ ಬದುಕಿನ ಪಯಣದ ಗತಿ ಬದಲಿಸಬೇಕಿದೆ. ‘ಬಾಳಿನ ಬೆನ್ನೆಲುಬು ವಿಶ್ವಾಸ. ವಿಶ್ವಾಸವೇ ವಿಶ್ವಚಾಲನೆಯ ಶ್ವಾಸ’ ಎಂಬ ಕೆ.ಎಸ್.ನಿಸಾರಅಹ್ಮದ್ ಅವರ ವಾಣಿಯಂತೆ ಹೊಸ ವರ್ಷ ನಮ್ಮೆಲ್ಲರ ಬದುಕಿಗೆ ಹೊಸ ಹುರುಪು ತುಂಬಲಿ. ಎಲ್ಲವನ್ನೂ ಗೆಲ್ಲುವ ಭರವಸೆ ನೀಡಲಿ. ಸವಾಲು ಮೀರಿ ನಿಲ್ಲುವ ಸೋಲನ್ನೇ ಸೋಲಿಸುವ ವಿಶ್ವಾಸ ಮೊಳೆಯಲಿ. ಪರರ ಕಷ್ಟಕ್ಕೆ ಸ್ಪಂದಿಸುವ ಛಲಗಾರಿಕೆ ಬೆಳೆಯಲಿ...