ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕಾಂತರಾಜ್‌ ವರದಿ ಜಾರಿಗೆ ವಿರೋಧ

Published 24 ನವೆಂಬರ್ 2023, 14:53 IST
Last Updated 24 ನವೆಂಬರ್ 2023, 14:53 IST
ಅಕ್ಷರ ಗಾತ್ರ

ಕಲಬುರಗಿ: ’ವೀರಶೈವ ಲಿಂಗಾಯತರು ಎಂದಿಗೂ ಜಾತಿಗಣತಿಯನ್ನಾಗಲಿ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನಾಗಲಿ ವಿರೋಧಿಸಿಲ್ಲ. ಆದರೆ ಇದೀಗ ಜಾತಿ ಗಣತಿ ವರದಿಯು ರಾಜಕೀಯ ದುರುದ್ದೇಶ ಮತ್ತು ಅನೇಕ ಲೋಪಗಳಿಂದ ಕೂಡಿದ್ದು, ಅದನ್ನು ಜಾರಿ ಮಾಡಬಾರದು‘ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ ರಾಜು ಕುಳಗೇರಿ ಹೇಳಿದರು.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’1984ರಲ್ಲಿ ನ್ಯಾ.ಚಿನ್ನಪ್ಪರೆಡ್ಡಿ ನೀಡಿದ ವರದಿ ಪ್ರಕಾರ 43 ಉಪಜಾತಿಗಳನ್ನು ಒಳಗೊಂಡು ವೀರಶೈವ ಲಿಂಗಾಯತರ ಜನಸಂಖ್ಯೆ 61.42 ಲಕ್ಷ ಇತ್ತು. ಅದರ ಪ್ರಕಾರವೇ ಲೆಕ್ಕ ಹಾಕಿದರೆ 2016ಕ್ಕೆ 1 ಕೋಟಿ 13 ಲಕ್ಷದ 70 ಸಾವಿರ ಆಗಬೇಕು. ಆದರೆ ಕಾಂತರಾಜ್‌ ಆಯೋಗದ ವರದಿಯಲ್ಲಿ 107 ಉಪಜಾತಿಗಳನ್ನು ಗುರುತಿಸಿದ್ದು, ಸಮಾಜದ ಜನಸಂಖ್ಯೆಯನ್ನು 59 ಲಕ್ಷಕ್ಕೆ ಕುಸಿದಿದೆ. ಇವರು ಸಮೀಕ್ಷೆಗೆ ಮನೆ, ಮನೆಗೂ ಬಂದಿಲ್ಲ, ವರದಿ ತಯಾರಿ ಎಲ್ಲಿ ಮಾಡಿದರು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಹಾಗಾಗಿ ಈ ವರದಿ ಜಾರಿಯಾಗಬಾರದು. ಇದರ ವಿರುದ್ಧ ರಕ್ತಪತ್ರ ಚಳವಳಿ ನಡೆಸುತ್ತೇವೆ. ಇನ್ನೊಮ್ಮೆ ಸಮೀಕ್ಷೆ ಮಾಡುವ ಅಗತ್ಯವಿದೆ‘ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಮಹಾಸಭಾ ಯುವಘಟಕದ ಅಧ್ಯಕ್ಷ ಎಂ.ಎಸ್‌.ಪಾಟೀಲ ನರಿಬೋಳಿ, ರವಿಹೂಗಾರ, ಬಾಪುರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT