ಕಲಬುರಗಿ: ಮುಂಬರುವ ಜನಗಣತಿ ಮತ್ತು ಜಾತಿಗಣತಿ ಸಂದರ್ಭದಲ್ಲಿ ಪಂಚ ಪೀಠಗಳ ನಿಲುವನ್ನು ಸ್ಪಷ್ಟಪಡಿಸುವ ಬಗ್ಗೆ ಚರ್ಚಿಸಲು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಮುಕ್ತಿಮಂದಿರದಲ್ಲಿ ಮೇ 7ರಂದು ಪಂಚ ಪೀಠಾಧೀಶರ ಸಭೆ ನಡೆಯಲಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದ್ದಾರೆ.

ಅಂದು ಸಂಜೆ 7ಕ್ಕೆ ನಡೆಯುವ ಸಭೆಯಲ್ಲಿ ಉಜ್ಜಯಿನಿ, ಕೇದಾರ, ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳು ಪಾಲ್ಗೊಳ್ಳಬೇಕು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಜನಗಣತಿ ಮತ್ತು ಜಾತಿಗಣತಿ ಸಂದಿಗ್ಧ ಪ್ರಸಂಗದಲ್ಲಿ ಪೀಠಗಳು ಒಕ್ಕೂಟ ವ್ಯವಸ್ಥೆಗೆ ಮುಂದಾಗಬೇಕು ಎಂದು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಪೀಠಾಭಿಮಾನಿಗಳ ಭಕ್ತರ ಒತ್ತಾಸೆಯ ಮೇರೆಗೆ ಈ ಸಭೆ ಕರೆಯಲಾಗಿದೆ. ಆಂತರಿಕ ಸಮಸ್ಯೆಗಳಿಗೆ ತಾರ್ಕಿಕವಾಗಿ ಅಂತ್ಯಗೊಳಿಸುವ ವಿಚಾರವನ್ನೂ ಚರ್ಚಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.