ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ: ಸೇವೆಗೆ ಸಹಭಾಗಿತ್ವ ಅವಶ್ಯಕ, ಚವಡಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು

ಕಮಲಾಪುರದಲ್ಲಿ ಸುರಕ್ಷಾ ಆಸ್ಪತ್ರೆ ಉದ್ಘಾಟನೆ
Last Updated 31 ಜುಲೈ 2021, 6:46 IST
ಅಕ್ಷರ ಗಾತ್ರ

ಕಮಲಾಪುರ: ‘ಅನ್ನ, ಅರಿವೆ, ಅರಿವು, ಆಶ್ರಯ ಹಾಗೂ ಆರೋಗ್ಯ ಮಾನವನ ಮೂಲ ಅವಶ್ಯಕತೆಗಳು. ಈ ಸೇವೆಗಳನ್ನು ಜನರಿಗೆ ಒದಗಿಸಲು ಸರ್ಕಾರದ ಜತೆಗೆ ಖಾಸಗಿ ಸಂಸ್ಥೆಗಳೂ ಕೈ ಜೋಡಿಸಬೇಕು’ ಎಂದು ಕಲಬುರ್ಗಿಯ ಚವಡಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ಸುರಕ್ಷಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಖಾಸಗಿ ವ್ಯಕ್ತಿ, ಸಂಸ್ಥೆ ಸೇವೆ ಮರೆಯುವಂತಿಲ್ಲ. ಕಮಲಾಪುರ ಸುತ್ತಲಿನ 30 ಕಿ.ಮೀ ಅಂತರದಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ. ಅಪಘಾತಗಳು, ತಾಂಡಾ, ಗ್ರಾಮಳಲ್ಲಿ ಸಂಭವಿಸುವ ಅವಘಡಗಳು ಮತ್ತಿತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ದೊರೆಯದೆ ಅನೇಕರು ಜೀವ ತೆತ್ತಿದ್ದಾರೆ ಎಂದರು.

ಬಸವರಾಜ ಮಠಪತಿ ಹಾಗೂ ಡಾ.ಪ್ರವಿಣ ಶೇರಿಯವರು ಸುರಕ್ಷಾ ಆಸ್ಪತ್ರೆ ಸ್ಥಾಪಿಸಿದ್ದು, ಕಡಿಮೆ ಖರ್ಚಿನಲ್ಲಿ ಈ ಭಾಗದ ಜನರಿಗೆ ಉತ್ತಮ ಸೇವೆ ಒದಗಿಸಬೇಕು ಎಂದರು.

ಶಾಂತವೀರ ಸ್ವಾಮೀಜಿ, ಬಿಜೆಪಿ ಹಿರಿಯ ಮುಖಂಡ ಸುಭಾಶ ಬಿರಾದಾರ, ಜಿ.ಪಂ ಮಾಜಿ ಸದಸ್ಯ ಶರಣಬಸಪ್ಪ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್‌, ಮಾಜಿ ಅಧ್ಯಕ್ಷ ಮಲ್ಲಿನಾಥ ಪಾಟೀಲ ಸೊಂತ, ಮುಖಂಡರಾದ ಗೋರಖನಾಥ ಶಾಕಾಪುರೆ, ಸಂಗಮೇಶ ವಾಲಿ, ತಹಶೀಲ್ದಾರ್ ಅಂಜುಮ್‌ ತಬಸುಮ್‌, ವೈದ್ಯಾಧಿಕಾರಿ ಜಯಕುಮಾರ ಸಾಮುವೆಲ್‌, ಅಬ್ದುಲ್‌ ಸತ್ತಾರ, ಉದಯಕುಮಾರ ಪಾಟೀಲ, ಶಿವಕುಮಾರ ದೋಶೆಟ್ಟಿ, ಡಾ. ಸಂತೋಷ ಮಂಗಶೆಟ್ಟಿ, ಇಬ್ರಾಹಿಂ ಸಾಬ್‌ ಅತ್ತಾರ, ಪಿಎಸ್‌ಐ ಭೀಮರಾಯ ಪಾಟೀಲ, ಡಾ.ಪ್ರವೀಣ ಶೇರಿ, ಬಸವರಾಜ ಮಠಪತಿ, ಪ್ರಶಾಂತ ಮಾನಕಾರ, ತಯ್ಯಬ್‌ ಚೌದ್ರಿ, ಸುರೇಶ ರಾಠೋಡ್‌ ಹಾಗೂ ಚೆನ್ನಬಸಪ್ಪ ಮುನ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT