ಶನಿವಾರ, ಅಕ್ಟೋಬರ್ 24, 2020
24 °C

ಪ್ರವಾಹದಲ್ಲಿ ಸಿಲುಕಿದ್ದ 77 ಜನರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಭಾರಿ ಮಳೆಯಿಂದಾಗಿ ಜಿಲ್ಲೆಯ ವಿವಿಧೆ ನಡುಗಡ್ಡೆ, ತೋಟದ ಮನೆಗಳಲ್ಲಿ ಸಿಲುಕಿಕೊಂಡಿದ್ದ 77 ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌), ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನಲ್ಲಿ 34, ಸೇಡಂ ತಾಲ್ಲೂಕಿನಲ್ಲಿ 28, ಶಹಾಬಾದ್‌ ತಾಲ್ಲೂಕಿನಲ್ಲಿ 12 ಹಾಗೂ ಕಲಬುರ್ಗಿ ತಾಲ್ಲೂಕು ಮಾಲಗತ್ತಿಯಲ್ಲಿ ಮೂವರನ್ನು ರಕ್ಷಿಸಲಾಗಿದೆ. ಜೇವರ್ಗಿ ಬಳಿಯ ನರಿಬೋಳ ಗ್ರಾಮದ ಬಳಿ ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಯುವಕನ ಪತ್ತೆ ಕಾರ್ಯದಲ್ಲೂ ಎನ್‌ಡಿಆರ್‌ಎಫ್‌ ತೊಡಗಿಸಿಕೊಂಡಿದೆ.

ಬಿಸ್ಸೆನ್ನೆಲ್ ಸೇವೆಯಲ್ಲಿ ವ್ಯತ್ಯಯ: ಭಾರಿ ಮಳೆ ಸುರಿದಿದ್ದರಿಂದಾಗಿ ಇಡೀ ದಿನ ಕಲಬುರ್ಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ
ಬಿಸ್ಸೆನ್ನೆಲ್‌ ಮೊಬೈಲ್‌ ಸೇವೆಗಳಲ್ಲಿ ವ್ಯತ್ಯಯವಾಯಿತು. ರಾತ್ರಿಯ ಬಳಿಕ ಸೇವೆ ಲಭ್ಯವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು