ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ನೀಡಲು ಛಾಯಾಗ್ರಾಹಕರ ಆಗ್ರಹ

Last Updated 8 ಅಕ್ಟೋಬರ್ 2020, 16:47 IST
ಅಕ್ಷರ ಗಾತ್ರ

ಕಾಳಗಿ: ‘ಕೋವಿಡ್ ಕಾರಣ ನಮಗೆ ಕೆಲಸ ಇಲ್ಲದಂತಾಗಿದೆ. ಈ ನಿರ್ಬಂಧದಿಂದ 2020ರ ಅಂತ್ಯದವರೆಗೂ ಯಾವುದೇ ಮದುವೆ ಮತ್ತಿತರ ಕಾರ್ಯಕ್ರಮಗಳು ಸಿಗುವುದಿಲ್ಲ. ಹೀಗಾಗಿ ಬಾಡಿಗೆ, ಕುಟುಂಬದ ನಿರ್ವಹಣೆ, ಮಕ್ಕಳ ಶಾಲಾ ಶುಲ್ಕ, ವಿದ್ಯುತ್, ನೀರು, ಸಾಲದ ಹೊರೆ ಮುಂತಾಗಿ ಎಲ್ಲದಕ್ಕೂ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರ ತಮಗೆ ನೆರವು ಘೋಷಿಸಬೇಕು’ ಎಂದು ಛಾಯಾಗ್ರಹಕರ ತಾಲ್ಲೂಕು ಸಂಘ ಮನವಿ ಮಾಡಿದೆ.

ಗುರುವಾರ ಇಲ್ಲಿನ ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿ ಸಂಘ ಒತ್ತಾಯಿಸಿದರು.

ಅಸಂಘಟಿತ ಕಾರ್ಮಿಕ ವಲಯದ 42ನೇ ವರ್ಗಕ್ಕೆ ಸೇರಿದ ಛಾಯಾಗ್ರಹಕರಿಗೆ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸ್ಮಾರ್ಟ್ ಕಾರ್ಡ್ ನೀಡಬೇಕು. ರಾಜ್ಯದಲ್ಲಿ 151 ವರ್ಷಗಳ ಇತಿಹಾಸವಿರುವ ಛಾಯಾಗ್ರಹಣಕ್ಕೆ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆಗೆ ಸಹಕಾರಗೊಳಿಸಬೇಕು. ಕೆಪಿಎ ಛಾಯಾ ಭವನಕ್ಕೆ ನಿವೇಶನ ಒದಗಿಸಬೇಕು. ವೃತ್ತಿಪರ ಛಾಯಾಗ್ರಹಕರ ವ್ಯಾಪಾರದ ನೆರವಿಗೆ ಸರ್ಕಾರ ಹಾಗೂ ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು. ಗ್ರಾಮ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಛಾಯಾಚಿತ್ರ ತೆಗೆಯುತ್ತಿರುವುದನ್ನು ಈ ಕೂಡಲೇ ನಿಷೇಧಿಸುವ ಆದೇಶ ಜಾರಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಸಲ್ಲಿಸಿದರು.

ಬೇಡಿಕೆ ಈಡೇರದಿದ್ದಲ್ಲಿ ರಾಜ್ಯದ ಎಲ್ಲಾ ಫೋಟೋಗ್ರಫಿ ಉದ್ಯಮ ಬಂದ್ ಮಾಡಿ, ಅ. 31ರಂದು ಕೇಂದ್ರ ಹಾಗೂ ಸರ್ಕಾರದ ವಿರುದ್ಧ ಬೆಂಗಳೂರು ಚಲೋ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಂಘದ ಅಧ್ಯಕ್ಷ ಗಣೇಶ ಸಿಂಗಶೆಟ್ಟಿ, ಉಪಾಧ್ಯಕ್ಷ ಶರಣು ರಾಜಾಪುರ, ಕಾರ್ಯದರ್ಶಿ ವೀರಯ್ಯ ಮಠಪತಿ, ಸಹಕಾರ್ಯದರ್ಶಿ ನಾಗಯ್ಯ ಮಠಪತಿ, ಖಜಾಂಚಿ ಲಿಂಗಬಸವ ಸೇಡಂ, ಸದಸ್ಯ ಗುರುರಾಜ ಗುತ್ತೇದಾರ, ಸಿದ್ದು ಜಿಲ್ಲಿ, ಬಸ್ಸು ಸಿಂಗಶೆಟ್ಟಿ, ಶಿವಶಂಕರ ಬಂಕಲಗಿ, ಅಣವೀರ ಮಠಪತಿ, ನಾಗರಾಜ ಮನ್ನಾಪುರ, ವೀರೇಶ ಜೋಳದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT