ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ‘ಕಾರ್ಮಿಕರ ಕಿಟ್‌ನಲ್ಲಿ ಕಳಪೆ ಸಾಮಗ್ರಿ’

ನವಕಲ್ಯಾಣ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮರಾವ ಕಂದಳ್ಳಿ ಆರೋಪ
Published 7 ಆಗಸ್ಟ್ 2024, 16:14 IST
Last Updated 7 ಆಗಸ್ಟ್ 2024, 16:14 IST
ಅಕ್ಷರ ಗಾತ್ರ

ಕಲಬುರಗಿ: ‘ಕಟ್ಟಡ ಕಾರ್ಮಿಕರಿಗೆ ನೆರವಾಗಲು ಸರ್ಕಾರದಿಂದ ವಿತರಿಸಲು ಖರೀದಿಸಿರುವ ಸಾಮಗ್ರಿಗಳು ಸಂಪೂರ್ಣ ಕಳಪೆಯಾಗಿವೆ’ ಎಂದು ನವಕಲ್ಯಾಣ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮರಾವ ಕಂದಳ್ಳಿ ಆರೋಪಿಸಿದ್ದಾರೆ.

‘ಕಿಟ್‌ ಸಾಮಗ್ರಿಗಳ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಬುಧವಾರ ಸಭೆ ಕರೆದಿದ್ದರು. ಆ ಸಭೆಯಲ್ಲಿ ಸಾಮಗ್ರಿಗಳನ್ನು ಪರಿಶೀಲಿಸಿದಾಗ ಕಟ್ಟಡ ಕಾರ್ಮಿಕರಿಗೆ ವಿತರಿಸುವ ಎಲ್ಲಾ ಸಾಮಗ್ರಿಗಳು ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿರುತ್ತವೆ. ಸದರಿ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವಂತೆ ಕಾಣುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಲಾಗಿದ್ದು, ಕೂಡಲೇ ಕಳಪೆ ಸಾಮಗ್ರಿಗಳನ್ನು ವಾಪಸ್‌ ಮಾಡಿ, ಗುಣಮಟ್ಟದ ಸಾಮಗ್ರಿಗಳನ್ನು ಖರೀದಿಸಿ ಕಟ್ಟಡ ಕಾರ್ಮಿಕರಿಗೆ ವಿತರಿಸುವಂತೆ ಒತ್ತಾಯಿಸಲಾಗಿದೆ’ ಎಂದಿದ್ದಾರೆ.

‘ಒಂದು ವೇಳೆ ನಮ್ಮ ಮನವಿಗೆ ಕಾರ್ಮಿಕ ಇಲಾಖೆ ಸ್ಪಂದಿಸದಿದ್ದರೆ, ಬರುವ ದಿನಗಳಲ್ಲಿ ಕಾರ್ಮಿಕ ಇಲಾಖೆಯ ಎದುರು ಉಗ್ರ ಹೋರಾಟ ಮಾಡಲಾಗುವುದು’ ಎಂದು ಭೀಮರಾವ ಕಂದಳ್ಳಿ, ಗೌರವಾಧ್ಯಕ್ಷ ರಾಜು ಜಮಾದಾರ, ಮುಖಂಡರಾದ ಶಿವುಕುಮಾರ ಬೆಳಗೇರಿ, ಮಹಾಂತೇಶ ದೊಡ್ಡಮನಿ, ಮರೆಪ್ಪ ರೊಟ್ಟನೊಡಗಿ, ದೇವಿಂದ್ರ ಉಳ್ಳಾಗಡ್ಡಿ, ಬಾಬುರಾವ ದೇವರಮನಿ ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT