ಕಲಬುರಗಿ: ‘ಕನ್ನಡ ಸತ್ವಯುತ ಭಾಷೆಯಾಗಿದೆ, ಕನ್ನಡವು ದೇವ ಭಾಷೆಯಾಗಿದೆ. ಜಗತ್ತಿನ ಹಲವು ಧರ್ಮಗಳಿಗೆ ತನ್ನದೇ ಭಾಷೆ ಇರುವಂತೆ ಲಿಂಗವಂತ ಧರ್ಮಕ್ಕೆ ಕನ್ನಡವು ಧರ್ಮ ಭಾಷೆಯಾಗಿದೆ. ಇಂಗ್ಲಿಷ್ ಭಾಷೆಯ ಪ್ರಭಾವಕ್ಕೆ ಜಗತ್ತಿನ ಹಲವು ಭಾಷೆಗಳು ನಶಿಸಿ ಹೋಗುತ್ತವೆ. ಕೇವಲ ಬೆರಳೆಣಿಕೆಯ ಭಾಷೆಗಳು ಮಾತ್ರ ಉಳಿಯುತ್ತವೆ. ಅದರಲ್ಲಿ ಕನ್ನಡ ಕೂಡ ಒಂದಾಗಿದೆ’ ಎಂದು ಬೆಳಗಾವಿಯ ಬಸವ ಬೆಳವಿಯ ಚರಂತಿಶ್ವರ ಮಠದ ಶರಣಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳ ಪರ್ಯಂತ ಜರುಗುತ್ತಿರುವ ವಚನ ಆಷಾಢ ಪ್ರವಚನದಲ್ಲಿ ಮಾತನಾಡಿದ ಅವರು, ‘ಕನ್ನಡ ಭಾಷೆ ಉಳಿಯಲು ಕಾರಣ ಅದರಲ್ಲಿ ವಚನ ಸಾಹಿತ್ಯವಿದೆ. ಆದ್ದರಿಂದ ಅದು ಉಳಿಯುತ್ತದೆ. ಉಪನಿಷತ್ತಿನಲ್ಲಿರುವುದೆಲ್ಲವೂ ವಚನದಲ್ಲಿದೆ. ಆದರೆ ವಚನದಲ್ಲಿರುವುದೆಲ್ಲವೂ ಉಪನಿಷತ್ತಿನಲ್ಲಿಲ್ಲ. 12ನೇ ಶತಮಾನದಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಮಾರುಹೋಗಿ ಒಡಿಶಾ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶದ ಹಲವು ಭಾಷೆ, ದೇಶಗಳಿಂದ ಬಂದು ಶರಣರಾದರು. ಅವರೆಲ್ಲರೂ ಕನ್ನಡವನ್ನು ಕಲಿತು ಕನ್ನಡದಲ್ಲಿ ವಚನಗಳನ್ನು ಬರೆದರು. ಲಿಂಗವಂತ ಸಿದ್ದಾಂತವು ಒಂದೇ ಭಾಷೆಯಲ್ಲಿರಲಿ ಎಂಬುದು ಅವರ ವಿಚಾರವಾಗಿತ್ತು ಎಂದರು .

ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ, ಕಾರ್ಯದರ್ಶಿಗಳಾದ ಆನಂದ ಸಿದ್ಧಾಮಣಿ, ಕೆ.ಎಸ್. ವಾಲಿ, ಬಂಡಪ್ಪ ಕೇಸುರ್, ಉದ್ದಂಡಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.