ಶನಿವಾರ, ಮೇ 21, 2022
25 °C

‘ಧರ್ಮ ಕಾರ್ಯಗಳಿಂದ ಶಾಂತಿ, ನೆಮ್ಮದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್: ‘ಧರ್ಮ ಕಾರ್ಯಗಳಿಂದ ಬದುಕಿನಲ್ಲಿ ಶಾಂತಿ ಕಂಡುಕೊಳ್ಳಲು ಸಾಧ್ಯ’ ಎಂದು ಬೆಳಗಾವಿ ನಿರಂಜನ ಸ್ವಾಮಿಗಳು ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವೀರಶೈವ ಮಹಿಳಾ ಘಟಕದ ವತಿಯಿಂದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶರಣಬಸವೇಶ್ವರ ಜಾತ್ರೆ ನಿಮಿತ್ತ ಆಯೋಜಿಸಲಾದ ಯೋಗ, ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳಗ್ಗೆ 6 ಗಂಟೆಗೆ ಯೋಗ ತರಬೇತಿ ನೀಡಲಾಯಿತು. ರಾತ್ರಿ 7ರಿಂದ 8 ಗಂಟೆಯವರೆಗೆ ಪ್ರವಚನ ಹಾಗೂ ಪ್ರಸಾದ ಸೇವೆ ನಡೆಯಿತು. ಬೆಳಗ್ಗೆ ಲಿಂಗಪೂಜೆ ವಿಧಾನ, ಮಹತ್ವ ಹೇಳಿಕೊಡಲಾಯಿತು.

ಸೂರ್ಯಕಾಂತ ಕೋಬಾಳ, ಲಿಂಗರಾಜ ಮಲಕೂಡ, ವಿಜಯಕುಮಾರ ಮುಟ್ಟತ್ತಿ, ಡಾ.ವೀರಭದ್ರಪ್ಪ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು