ಮಂಗಳವಾರ, ಜೂನ್ 2, 2020
27 °C

ಕೋವಿಡ್‌ ಸೋಂಕಿತರನ್ನುಅಪರಾಧಿಗಳಂತೆ ನೋಡಬೇಡಿ: ಮುಹಮ್ಮದ್ ಝಿಯಾಉಲ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕೋವಿಡ್‌–19 ಸೋಂಕಿತರು ಹಾಗೂ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದವರನ್ನು ‘ಅಪರಾಧಿಗಳು’ ಎಂಬಂತೆ ನೋಡುವ ದೃಷ್ಟಿಕೋನ ಬದಲಾಗಬೇಕು. ರೋಗ ಯಾರಿಗಾದರೂ ಬರಬಹುದು. ಹಾಗಾಗಿ, ಇದರಲ್ಲಿ ಯಾರನ್ನೂ ದೂಷಿಸುವ, ದೂರ ತಳ್ಳುವ ಕೆಲಸ ಸಲ್ಲದು. ಅಗತ್ಯವಿದ್ದವರ ಸಹಾಯಕ್ಕೆ ಮುಂದಾಗುವುದೇ ನಿಜವಾದ ಮಾನವೀಯತೆ’ ಎಂದು ಜಮಾತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಘಟಕದ ಸಂಚಾಲಕ ಮುಹಮ್ಮದ್ ಝಿಯಾಉಲ್ಲಾ ತಿಳಿಸಿದ್ದಾರೆ.

‘ಕೊರೊನಾಗೆ ಯಾವುದೇ ಜಾತಿ, ಧರ್ಮದ ನಂಟು ಕಟ್ಟುವುದು ಸರಿಯಲ್ಲ. ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಕು ಎಂಬ ಉದ್ದೇಶ ಯಾರಿಗೂ ಇರುವುದಿಲ್ಲ. ಆದರೆ, ಕೆಲವು ಹಿತಾಸಕ್ತಿಗಳು ಇದಕ್ಕೆ ಧರ್ಮದ್ವೇಷದ ಬೀಜ ಬಿತ್ತುತ್ತಿದ್ದಾರೆ. ಭಾರತವು ಬಹುತ್ವದ ಮೇಲೆ ನಿಂತ ದೇಶ. ಎಲ್ಲವೂ ಸರಿಯಾಗಿ ಇದ್ದಾಗ ತೋರಿಸುವುದು ಮಾತ್ರ ಏಕತೆ ಅಲ್ಲ. ಸಂಕಷ್ಟದ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಒಂದಾಗಿ ನಡೆಯುವುದು ನಿಜವಾದ ಏಕತೆ. ನಾವು ಎಚ್ಚರಿಕೆಯಿಂದ ಇರುವ ಜತೆಗೆ ಸೋಂಕಿತರ ಸಹಾಯಕ್ಕೆ ನೆರವಾಗಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.