ಕಲಬುರ್ಗಿ: ‘ಸಂಕಷ್ಟದ ಸಂದರ್ಭದಲ್ಲಿ ಮಳೆ, ಬಿಸಿಲು ಎಂದು ನೋಡದೇ ಜನರ ಸೇವೆಗೆ ನಿಲ್ಲಬೇಕಾಗಿರುವುದು ನಮ್ಮ ಕೆಲಸ. ಕೋವಿಡ್ನಂಥ ಸಾಂಕ್ರಾಮಿಕ ಸಂದರ್ಭದಲ್ಲಿ ನಾವು ನಮ್ಮ ಎಲ್ಲ ಪ್ರಯತ್ನವನ್ನೂ ಜನರಿಗಾಗಿ ಮಾಡಲೇಬೇಕಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಹೊನಗುಂಟಾ ಅವರ ನೇತೃತ್ವದಲ್ಲಿ ಆಯೋಜಿಸಿದ ಜಿಮ್ಸ್, ಇಎಸ್ಐ ಹಾಗೂ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಹಾಯಕರಿಗೆ ಮತ್ತು ಸಿಬ್ಬಂದಿಕರಿಗೆ ಊಟ ನೀಡುವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೊನಾ ಎರಡನೇ ಅಲೆಯಿಂದ ಲಾಕ್ಡೌನ್ ಆದಾಗಿನಿಂದಲೂ ಜನರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಇಂಹತ ಸಂದರ್ಭದಲ್ಲಿ ಊಟ, ನೀರು ನೀಡುತ್ತಿರುವುದು ಒಳ್ಳೆಯ ಕೆಲಸ’ ಎಂದರು.

ಕಾರ್ಯಕರ್ತರಾದ ಪ್ರವೀಣ್ ಪಾಟೀಲ ಹರವಾಳ, ಕಿರಣ ದೇಶಮುಖ, ಮಜರ್ ಆಲಂ ಖಾನ್, ಫಾರೂಖ್ ಮನಿಯಾರ್, ರಾಜು ಕಪನೂರ, ಸಂತೋಷ ಬೆನ್ನೂರ್, ಈರಣ್ಣ ಝಳಕಿ, ಖೂಸರೋ ಜಾಗಿರ್ದಾರ್, ಪರಶುರಾಮ ನಾಟೇಕರ, ಅಮರ್ ಶಿರವಾಳ, ಅಶ್ವಿನ್ ಸಂಕ, ಸಚಿನ್ ಶಿರವಾಳ, ಸೈಯದ್ ರಕಿಬ್, ಅರ್ಷದ್ ಖಾನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಡಿಸಿಸಿ ನಾಯಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.