ಬುಧವಾರ, ಆಗಸ್ಟ್ 4, 2021
22 °C

ಅಂಬೇಡ್ಕರ್‌ ಮನೆ ಮೇಲೆ ಕಲ್ಲುತೂರಿದ್ದಕ್ಕೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸೇರಿದ ಮಹಾರಾಷ್ಟ್ರದ ದಾದರ್‌ ನಿವಾಸ ರಾಜಗೃಹದ ಮೇಲೆ ನಡೆದ ಕಲ್ಲುತೂರಾಟದ ಘಟನೆ ಖಂಡಿಸಿ, ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸಲು ಒತ್ತಾಯಿಸಿ ದಲಿತ ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ತಾಲ್ಲೂಕು ಅಧ್ಯಕ್ಷ ಧರ್ಮಾ ಬಂಗರಗಾ ಮಾತನಾಡಿ, ಕಲ್ಲು ತೂರಾಟದಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಹಾಗೂ ರಾಜಗೃಹಕ್ಕೆ ನಿರಂತರ ಪೊಲೀಸ್‌ ಬಂದೋಬಸ್ತ್‌ ಒದಗಿಸುವಂತೆ ಆಗ್ರಹಿಸಿದರು.

ಮುಖಂಡರಾದ ಶರಣಬಸಪ್ಪ ಕವಲಗಾ, ಚಂದ್ರಶಾ ಗಾಯಕವಾಡ, ಲಕ್ಷ್ಮಣ ನಿಂಬಾಳ, ಆಕಾಶ ವಾಘಮೋರೆ, ಮಂಜುನಾಥ ಸಿಂಗೆ, ಮಹೇಂದ್ರ ಸಿಂಗೆ, ದತ್ತಾತ್ರೇಯ ಕಟ್ಟಿಮನಿ, ಸಂತೋಷ ಪಟ್ಟೇದ, ಶಶಿ ವಿಭೂತೆ, ಲಕ್ಷ್ಮಣ ತಳಕೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು