ಶನಿವಾರ, ಮೇ 28, 2022
21 °C

ಕುಂಚಾವರಂಗೆ ಪಿಯು ಕಾಲೇಜು ಮಂಜೂರಿಗೆ ಯತ್ನ: ಅವಿನಾಶ ಜಾಧವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಗಡಿಗ್ರಾಮ ಕುಂಚಾವರಂ ಮತ್ತು ತಾಲ್ಲೂಕಿನ ಹೃದಯಭಾಗ ಚಿಮ್ಮನಚೋಡ, ಐನಾಪುರ, ಮೋಘಾ, ರಟಕಲ್ ಗ್ರಾಮಗಳಲ್ಲಿ ಪಿಯು ಕಾಲೇಜು ಮಂಜೂರಾತಿ ಕುರಿತು ಜನರಿಂದ ಬೇಡಿಕೆ ಬಂದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಪ್ರೌಢ ಶಾಲೆ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ ಎಂದು ಶಾಸಕ ಅವಿನಾಶ ಉಮೇಶ ಜಾಧವ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಚಾವರಂ ಗ್ರಾಮಕ್ಕೆ ಪಿಯು ಕಾಲೇಜು ಅಗತ್ಯವಿತ್ತು. ಆದರೆ ಮೊದಲನೆ ಪಟ್ಟಿಯಲ್ಲಿ ಇದು ಸೇರದಿರುವುದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಿದೆ ಎಂದಾಗ 2ನೇ ಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಪರೋಕ್ಷವಾಗಿ ಕುಂಚಾರಂಗೆ ಪಿಯು ಕಾಲೇಜು ಮಂಜೂರು ಮಾಡುವ ಇಂಗಿತ ವ್ಯಕ್ತಪಡಿಸಿದರು.

ಅಶೋಕ ಚವ್ಹಾಣ, ರಾಜು ಪವಾರ್, ಅಲ್ಲಮಪ್ರಭು ಹುಲಿ, ಹಣಮಂತ ಭೋವಿ, ಲಕ್ಷ್ಮಣ ಅವುಂಟಿ  ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು