ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸನ್ ಶತಕ; ‌ಸೂಪರ್‌ಕಿಂಗ್ಸ್‌ ಜಯಭೇರಿ

Last Updated 20 ಏಪ್ರಿಲ್ 2018, 20:00 IST
ಅಕ್ಷರ ಗಾತ್ರ

ಪುಣೆ: ಅನುಭವಿ ಆಲ್‌ರೌಂಡರ್ ಶೇನ್ ವಾಟ್ಸನ್ (106; 57ಎ, 9ಬೌಂ, 6ಸಿ) ಅವರ ಸಿಡಿಲಬ್ಬರದ ಶತಕ ಮತ್ತು ಮಧ್ಯಮ ವೇಗಿಗಳ ಸಮರ್ಥ ದಾಳಿಯ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಶುಕ್ರವಾರದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಗೆದ್ದಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 205 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 140 ರನ್‌ಗಳಿಗೆ ಆಲೌಟಾಗಿ 64 ರನ್‌ಗಳ ಸೋಲೊಪ್ಪಿಕೊಂಡಿತು.

ನಾಯಕ ಅಜಿಂಕ್ಯ ರಹಾನೆ ಒಳಗೊಂಡಂತೆ ರಾಯಲ್ಸ್ ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು 32 ರನ್‌ ಗಳಿಸುವಷ್ಟರಲ್ಲಿ ಔಟಾದರು. ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್‌ ತಂಡಕ್ಕೆ ಆಸರೆಯಾಗುವ ಭರವಸೆ ಮೂಡಿಸಿದರು. ಆದರೆ ನಾಲ್ಕನೇ ವಿಕೆಟ್‌ಗೆ 45 ರನ್‌ಗಳ ಜೊತೆಯಾಟವಾಡಿ ಸೇರಿಸಿ ಬಟ್ಲರ್ ಔಟಾದರು.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡದ ಶೇನ್ ವಾಟ್ಸನ್ 185.96ರ ಸ್ಟ್ರೈಕ್‌ರೇಟ್‌ನಲ್ಲಿ ಶತಕ  ದಾಖಲಿಸಿದರು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಗುರುವಾರ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್‌ ಗೇಲ್ ಶತಕ ಬಾರಿಸಿದ್ದರು.

ಅಂಬಟಿ ರಾಯುಡು ಜೊತೆ ಮೊದಲ ವಿಕೆಟ್‌ಗೆ 50 ರನ್‌ ಕಲೆ ಹಾಕಿದ ವಾಟ್ಸನ್‌ ಸುರೇಶ್ ರೈನಾ (46 ರನ್) ಜೊತೆ ಎರಡನೇ ವಿಕೆಟ್‌ಗೆ 81 ರನ್‌ಗಳನ್ನು ಸೇರಿಸಿದರು. ಮಹೇಂದ್ರ ಸಿಂಗ್ ದೋನಿ ಮತ್ತು ಸ್ಯಾಮ್ ಬಿಲಿಂಗ್ಸ್ ಬೇಗನೇ ಔಟಾದರು. ನಂತರ ವಾಟ್ಸನ್ ಅವರ ಜೊತೆಗೂಡಿದ ಡ್ವೇನ್ ಬ್ರಾವೊ (24; 16ಎ, 4ಬೌಂ) ಐದನೇ ವಿಕೆಟ್‌ಗೆ 41 ರನ್‌ ಗಳಿಸಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು: ಸಿಎಸ್‌ಕೆ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 204 (ಶೇನ್ ವಾಟ್ಸನ್ 106, ಅಂಬಟಿ ರಾಯುಡು 12, ಸುರೇಶ್ ರೈನಾ 46, ಮಹೇಂದ್ರಸಿಂಗ್ ದೋನಿ 5, ಡ್ವೇನ್ ಬ್ರಾವೊ ಔಟಾಗದೆ 24; ಬೆನ್ ಲಾಫ್ಲಿನ್ 38ಕ್ಕೆ2, ಶ್ರೇಯಸ್ ಗೋಪಾಲ್ 20ಕ್ಕೆ3); ರಾಜಸ್ಥಾನ್ ರಾಯಲ್ಸ್‌: 18.3 ಓವರ್‌ಗಳಲ್ಲಿ 140ಕ್ಕೆ ಆಲೌಟ್‌ (ಅಜಿಂಕ್ಯ ರಹಾನೆ 16, ಬೆನ್‌ ಸ್ಟೋಕ್ಸ್‌ 45, ಜೋಸ್ ಬಟ್ಲರ್‌ 22, ಸ್ಟುವರ್ಟ್‌ ಬಿನ್ನಿ 10, ಜಯದೇವ ಉನದ್ಕತ್‌ 16; ದೀಪಕ್ ಚಾಹರ್‌ 30ಕ್ಕೆ2, ಶಾರ್ದೂಲ್ ಠಾಕೂರ್‌ 18ಕ್ಕೆ2, ಡ್ವೇನ್‌ ಬ್ರಾವೊ 16ಕ್ಕೆ2, ಕರ್ಣ ಶರ್ಮಾ 13ಕ್ಕೆ2). ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 64 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT