ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಟೂರ್ನಿ: ರಾಯಚೂರು ವಲಯ ತಂಡಕ್ಕೆ ಸೋಲು

19 ವರ್ಷದೊಳಗಿನವರ ಅಂತರ ಗ್ರಾಮಾಂತರ ಕ್ರಿಕೆಟ್‌ ಟೂರ್ನಿ
Published 13 ಆಗಸ್ಟ್ 2023, 13:17 IST
Last Updated 13 ಆಗಸ್ಟ್ 2023, 13:17 IST
ಅಕ್ಷರ ಗಾತ್ರ

ಕಲಬುರಗಿ: ರಾಯಚೂರು ವಲಯ ತಂಡವು ಅಂತರ ಗ್ರಾಮಾಂತರ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಅಂತಿಮ ಲೀಗ್‌ ಪಂದ್ಯದಲ್ಲಿ ಭಾನುವಾರ ಮಂಗಳೂರು ವಲಯ ತಂಡಕ್ಕೆ ಸೋತಿತು.

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟ್ ಮಾಡಿದ ರಾಯಚೂರು 30.5 ಓವರ್‌ಗಳಲ್ಲಿ ಕೇವಲ 101 ರನ್‌ ಗಳಿಸಿ ಎಲ್ಲ ವಿಕೆಟ್ ಕೈಚೆಲ್ಲಿತು. ನಾಯಕ ಪ್ರಭು ಸಸಾಲಟ್ಟಿ (51) ಮಾತ್ರ ಎದುರಾಳಿ ಬೌಲರ್‌ಗಳಿಗೆ ಅಲ್ಪ ಪ್ರತಿರೋಧ ತೋರಿದರು.

ಸಾಧಾರಣ ಗುರಿ ಬೆನ್ನತ್ತಿದ ಮಂಗಳೂರು, ಆರಂಭದಲ್ಲಿ ಆತಂಕ ಎದುರಿಸಿದರೂ ನಿಹಾಂಶ್‌ ಪೂಜಾರಿ (ಔಟಾಗದೇ 45) ಅವರ ಬ್ಯಾಟಿಂಗ್ ಬಲದಿಂದ ಗೆಲುವಿನ ದಡ ಸೇರಿತು. ಆ ತಂಡವು 24.2 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 102 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರು: ರಾಯಚೂರು ವಲಯ: 30.5 ಓವರ್‌ಗಳಲ್ಲಿ 101 (ಪ್ರಭು ಸಸಾಲಟ್ಟಿ 51, ಶ್ರೀಧರ್ ಜಗತಾಪ 13; ಆಶಿಶ್ ನಾಯಕ್‌ 16ಕ್ಕೆ 5,  ಅಮೃತ್ ಪ್ರವೀಣ್‌ 21ಕ್ಕೆ 3,ನಿಶ್ಚಿತ್ ಪೈ 23ಕ್ಕೆ 2).

ಮಂಗಳೂರು ವಲಯ: 24.2 ಓವರ್‌ಗಳಲ್ಲಿ 6 ವಿಕೆಟ್‌ಗೆ 102 (ಅಕ್ಷಯ್ ಕಾಮತ್‌ 14, ನಿಹಾಂಶ್ ಪೂಜಾರಿ ಔಟಾಗದೇ 45; ರಾಹುಲ್ ಬೆಲ್ಲದ್ 33ಕ್ಕೆ 3). ಫಲಿತಾಂಶ: ಮಂಗಳೂರು ವಲಯ ತಂಡಕ್ಕೆ 4 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT