ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಚಿತ್ತಾಪುರ, ಕಾಳಗಿ, ಚಿಂಚೋಳಿ ತಾಲ್ಲೂಕಿನಲ್ಲಿ ಮಂಗಳವಾರ ಗುಡುಗು, ಮಿಂಚು ಸಹಿತ ಉತ್ತಮ ಮಳೆ ಸುರಿಯಿತು. ಇದರಿಂದಾಗಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪು ನೀಡಿತು.
ಕಲಬುರಗಿ ನಗರದಲ್ಲಿ ಕೆಲ ಕಾಲ ಬಿರುಸಿನ ಮಳೆ ಸುರಿಯಿತು.
ಚಿಂಚೋಳಿ, ಚಂದಾಪುರ ಅವಳಿ ಪಟ್ಟಣದಲ್ಲಿ ಚರಂಡಿಗಳು ತುಂಬಿ ಹರಿದವು. ಸುಲೇಪೇಟ, ಚಿಮ್ಮಾಈದಲಾಯಿ, ದೇಗಲಮಡಿ, ಪಂಚಪುರ ಗ್ರಾಮಗಳು ಸೇರಿದಂತೆ ವಿವಿಧೆಡೆ ಮಳೆಯಾಯಿತು. ಬಿರುಗಾಳಿ ಮಳೆಯಿಂದ ತಾಲ್ಲೂಕಿನಾದ್ಯಂತ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಕಾಳಗಿ ತಾಲ್ಲೂಕಿನಲ್ಲಿಯೂ ಕೆಲ ಕಾಲ ಮಳೆ ಸುರಿಯಿತು.
ಚಿತ್ತಾಪುರ ಪಟ್ಟಣ ಸೇರಿದಂತೆ ವಿವಿಧೆಡೆ ಸಂಜೆ ಬಿರುಗಾಳಿ, ಗುಡುಗು ಮಿಂಚು ಸಹಿತ ಮಳೆ ಬಂದಿದೆ.