ಭಾನುವಾರ, ಜುಲೈ 3, 2022
24 °C

ಕಲಬುರ್ಗಿ: ವಿವಿಧೆಡೆ ಭಾರಿ ಮಳೆ, ಮುಂಗಾರು ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

PV Photo

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಭಾರಿ ಮಳೆಯಾಗಿದೆ.

ಕಾಳಗಿ ತಾಲ್ಲೂಕಿನ ‌ಕೋಡ್ಲಿ ಗ್ರಾಮದಲ್ಲಿ 108.4 ಮಿ.ಮಿ. ದಾಖಲೆಯ ಮಳೆ ಸುರಿದಿದೆ. ಇಷ್ಟೊಂದು ‌ಪ್ರಮಾಣದ ಮಳೆ ಕಳೆದ ಸೆಪ್ಟೆಂಬರ್ ನಲ್ಲಿ ಸುರಿದಿತ್ತು.

ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡದಲ್ಲಿ 68.2 ಮಿ.ಮೀ, ಸುಲೇಪೇಟದಲ್ಲಿ 16.4 ಮಿ.ಮೀ, ಚಿಂಚೋಳಿ 13 ಮಿ.ಮೀ, ಐನಾಪುರ 6.8 ಮಿ.ಮೀ, 6.3 ನಿಡಗುಂದಾ ಮಿ.ಮೀ ಮಳೆಯಾಗಿದೆ. 

ಮಳೆಯಿಂದ ರೈತರು ಸಂತಸಗೊಂಡಿದ್ದು ತಾಲ್ಲೂಕಿನಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕು ಪಡೆಯಲಿವೆ. ಗುಡುಗು, ಮಿಂಚಿನೊಂದಿಗೆ ಸುರಿದ ರೋಹಿಣಿ ಮಳೆ ರೌದ್ರಾವತಾರ ತೋರಿದ್ದು ಮೊದಲ‌ ಮಳೆಗೇ ಹೊಳೆಗಳು ತುಂಬಿ ಹರಿದವು.

ಮಳೆಯಿಂದ ಹೊಲಗಳು ತೊಯ್ದು ತೊಪ್ಪೆಯಾಗಿವೆ. ರಸ್ತೆಗಳು ಕೆಸರು ಕೊಚ್ಚೆಯಾಗಿವೆ. ಚರಂಡಿಗಳು ತುಂಬಿ ಹರಿದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು