ಕಲಬುರಗಿ: ನಗರದಲ್ಲಿ ಭಾನುವಾರ ರಾತ್ರಿ ಬೀಸಿದ ಬಿರುಗಾಳಿ ಹಾಗೂ ಸುರಿದ ಮಳೆಗೆ ನಗರದಲ್ಲು ಹಲವು ಕಡೆ ಮರಗಳು ಉರುಳಿಬಿದ್ದಿದ್ದು ಪ್ರಯಾಣಿಕರು ಸಂಕಟ ಅನುಭವಿಸಿದರು.

ನಗರದ ರೋಟರಿ ಶಾಲೆಯಿಂದ ಆನಂದ ಹೋಟೆಲ್ಗೆ ಹೋಗುವ ಮಾರ್ಗದಲ್ಲಿದ್ದ ಮರ ಗಾಳಿಗೆ ಉರುಳಿ ಬಿದ್ದಿದ್ದರಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯಾಹ್ನದ ಬಳಿಕ ಮಹಾನಗರ ಪಾಲಿಕೆ ಸಿಬ್ಬಂದಿ ಆ ಮರವನ್ನು ತೆರವುಗೊಳಿಸಿದರು.

ನಗರದ ಹಳೇ ಜೇವರ್ಗಿ ರಸ್ತೆಯ ವೆಂಕಟಗಿರಿ ಹೋಟೆಲ್ ಬಳಿಯೂ ಮರವೊಂದು ರಾತ್ರಿ ಉರುಳಿ ಬಿದ್ದಿತ್ತು. ಅದನ್ನು ಪಾಲಿಕೆ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಗರದ ಕೋರ್ಟ್ ಸರ್ಕಲ್ನಿಂದ ಜೆಸ್ಕಾಂ ಪ್ರಧಾನ ಕಚೇರಿಗೆ ಹೋಗುವ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದ್ದು, ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.

ಜಿಲ್ಲೆಯ ಕಾಳಗಿ ತಾಲ್ಲೂಕಿನ ಪಸ್ತಾಪುರದಲ್ಲಿ ಸೋಮವಾರ ಭಾರಿ ಮಳೆ ಸುರಿದಿದ್ದು, ಗ್ರಾಮದ ಅಂಗಡಿ, ಮನೆಗಳಿಗೆ ನುಗ್ಗಿದೆ. ಭಾರಿ ಮಳೆಯಿಂದಾಗಿ ನೀರು ಹೊಳೆಯಂತೆ ರಸ್ತೆಗಳಲ್ಲಿ ಹರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.