ಕಲಬುರ್ಗಿ: ‘ಪೋಲಿಸ್ ಇಲಾಖೆಯವರಿಗೂ ಒತ್ತಡಮಯ ಜೀವನವಿರುತ್ತದೆ. ಅದನ್ನು ತಡೆಯಲು ರಾಜಯೋಗ ಖಂಡಿತವಾಗಿಯು ಸಹಯೋಗ ನೀಡುತ್ತದೆ’ ಎಂದು ಕಲಬುರ್ಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ತಿಳಿಸಿದರು.

ಬ್ರಹ್ಮಾಕುಮಾರಿಸ್‌ನ ಪ್ರಥಮ ಮುಖ್ಯಸ್ಥೆಯಾದ ರಾಜಯೋಗಿನಿ ಜಗದಂಬಾ ಸರಸ್ವತಿ ಅವರ 56ನೇ ಪುಣ್ಯ ಸ್ಮೃತಿದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ನಾಲ್ಕಾರು ಕಡೆ ಬ್ರಹ್ಮಾಕುಮಾರಿ ಸಂಸ್ಥೆಯ ಕಾರ್ಯಕಲಾಪಗಳನ್ನು ನೋಡಿದ್ದೇನೆ. ಇವರ ತ್ಯಾಗ ಹಾಗೂ ಸೇವಾ ಮನೋಭಾವನೆ ಶ್ಲಾಘನೀಯ. ಕಲಬುರ್ಗಿಯಲ್ಲಿ ಇಷ್ಟು ದೊಡ್ಡ ಹಾಗೂ ಶಾಂತಿಯುತ ವಾತಾವರಣ ಇರಬಹುದೆಂದು ನನಗೆ ಅನಿಸಿರಲಿಲ್ಲ. ಕಲಬುರ್ಗಿ ಜನತೆಗೆ ಇದೊಂದು ಅಪರೂಪದ ಕೊಡುಗೆ’ ಎಂದರು.

ಕಾರ್ಯಕ್ರಮದಲ್ಲಿ ನಗರದ ಕೇಂದ್ರಗಳ ಬ್ರಹ್ಮಾಕುಮಾರ ಕುಮಾರಿಯರಾದ ರಾಜೇಶ್ವರಿ, ನೀಲಕ್ಕ, ಶಕುಂತಲಾ, ತೆಲಂಗಾಣದ ವನಪರ್ತಿಯ ಶೋಭಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಲೀಲಾ ನಿರ್ವಹಣೆ ಮಾಡಿದರು.

ಕಲಬುರ್ಗಿ ವಲಯ ರಾಜಯೋಗ ಕೇಂದ್ರಗಳ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ವಿಜಯಾ ಸನ್ಮಾನಿಸಿ ಸ್ವಾಗತಿಸಿದರು. ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಪ್ರೇಮಣ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.