ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರದ ದತ್ತ ದೇವಸ್ಥಾನ ಆವರಣದಲ್ಲಿ ದತ್ತ ಮಹಾರಾಜರ ಜನ್ಮೋತ್ಸವ ನಿಮಿತ್ತ ಗುರುವಾರ ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ಸಂಭ್ರಮದಿಂದ ಜರುಗಿತು.

ದತ್ತ ದೇವಸ್ಥಾನದಿಂದ ಹನುಮಾನ್ ದೇವಸ್ಥಾನದವರೆಗೆ ಮೆರವಣಿಗೆ ಜರುಗಿತು. ಭಕ್ತರು ತೇರಿಗೆ ಹೂವು, ಹಣ್ಣು , ಕಾಯಿ, ಕರ್ಪೂರ ಅರ್ಪಿಸಿ ಪುನೀತರಾದರು.

ರಥೋತ್ಸವ ನಿಮಿತ್ತ ದೇವಸ್ಥಾನದಲ್ಲಿ ದತ್ತ ಮಹಾರಾಜರಿಗೆ ಮಧ್ಯಾಹ್ನ ಎರಡು ಗಂಟೆಗೆ ಕಾಕಡಾರತಿ, ದತ್ತ ಮಹಾರಾಜರ ಪಾದುಕೆಗಳಿಗೆ ಕೇಸರ ಲೇಪನ ಪೂಜೆ ಜರುಗಿತು.

ರಥೋತ್ಸವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಗುತ್ತೇದಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಬಲವಂತ ಜಕಬಾ, ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ ಬಿರಾದಾರ, ಅರ್ಚಕರಾದ ಸಚಿನ್ ಭಟ್ಟ ಪೂಜಾರಿ, ಪ್ರಸನ್ನ ಭಟ್, ನಂದಕುಮಾರ್ ಭಟ್ಟ , ವಿನೋದ್ ಭಟ್ , ಪ್ರಿಯಾಂಕಾ ಭಟ್ಟ, ಗಂಗಾಧರ ಭಟ್ಟ, ಉದಯ ಭಟ್ಟ, ಗುರುರಾಜ್ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.