ಶುಕ್ರವಾರ, ಜೂನ್ 25, 2021
27 °C
ಬೆಳಗಾವಿ ಐಜಿಪಿ ಆಗಿ ವರ್ಗವಾದ ಎನ್‌.ಸತೀಶಕುಮಾರ

ರವಿಕುಮಾರ್‌ ಕಲಬುರ್ಗಿ ಕಮಿಷನರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಕಲಬುರ್ಗಿ: ನಗರದ ಪೊಲೀಸ್‌ ಕಮಿಷನರ್‌ ಆಗಿದ್ದ ಎನ್.ಸತೀಶಕುಮಾರ ಅವರನ್ನು ಬೆಳಗಾವಿ ವಲಯದ ಐಜಿಪಿಯಾಗಿ ಸರ್ಕಾರ ವರ್ಗಾವಣೆ ಮಾಡಿದೆ. ಇಲ್ಲಿನ ನೂತನ ಕಮಿಷನರ್‌ ಆಗಿ ವೈ.ಎಸ್.ರವಿಕುಮಾರ ಅವರನ್ನು ನಿಯೋಜನೆ ಮಾಡಿದೆ.

ಒಂದು ವರ್ಷದಿಂದ ಕಲಬುರ್ಗಿ ಆಯುಕ್ತಾಲಯದ ಆಯುಕ್ತರಾಗಿ ಸತೀಶಕುಮಾರ ಸೇವೆ ಸಲ್ಲಿಸಿದರು. ಕೆಲ ತಿಂಗಳ ಹಿಂದೆ ಅವರಿಗೆ ಐಜಿಪಿ ಹುದ್ದೆ ಬಡ್ತಿ ಸಿಕ್ಕಿತ್ತು.

ರವಿಕುಮಾರ ಅವರು 2007ನೇ ಸಾಲಿನ ಐಪಿಎಸ್‌ ಕೇಡರ್‌ನ ಅಧಿಕಾರಿ. ಸದ್ಯ ಅವರು ಬೆಂಗಳೂರಿನಲ್ಲಿ ನೇಮಕಾತಿ ವಿಭಾಗದ ಡಿಐಜಿ ಆಗಿದ್ದರು.

ಇದರ ಮಧ್ಯೆ, ಕಲಬುರ್ಗಿ ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬಿಕರ್ ಅವರಿಗೆ ಬಳ್ಳಾರಿ ವಲಯದ ಐಜಿಪಿ ಹುದ್ದೆಯ ಪ್ರಭಾರವನ್ನೂ ವಹಿಸಲಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು