ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಲಂಬಾಣಿ ಸಮುದಾಯದ ಜನಸಂಖ್ಯೆ 35 ಲಕ್ಷ

Published 12 ಮೇ 2024, 18:43 IST
Last Updated 12 ಮೇ 2024, 18:43 IST
ಅಕ್ಷರ ಗಾತ್ರ

ಕಲಬುರಗಿ: ‘ವಿವಿಧ ಅಧ್ಯಯನಗಳು ಹಾಗೂ ಲಭ್ಯವಿರುವ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ಬಂಜಾರ, ಲಂಬಾಣಿ ಜನಾಂಗದ ಜನಸಂಖ್ಯೆ ಪ್ರಸ್ತುತ 35 ಲಕ್ಷಕ್ಕೂ ಹೆಚ್ಚು ಮತ್ತು ದೇಶದಲ್ಲಿ 7ರಿಂದ 9 ಕೋಟಿ ಇದೆ. ನಿಖರವಾದ ಅಂಕಿ ಅಂಶ ಸರ್ಕಾರದ ಜಾತಿ ಜನಗಣತಿಯಿಂದ ಬರಬೇಕಿದೆ’ ಎಂದು ಭಾಷಾ ಹಾಗೂ ಸಾಂಸ್ಕೃತಿಕ ಚಿಂತಕರಾದ ಎ.ಆರ್. ಗೋವಿಂದಸ್ವಾಮಿ, ಪ್ರೊ.ಶಾಂತ ನಾಯಕ್, ಡಿ. ಪರಮೇಶ ನಾಯಕ ತಿಳಿಸಿದ್ದಾರೆ.

‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಕಲ್ಯಾಣ ಕರ್ನಾಟಕದಲ್ಲಿ ಲಂಬಾಣಿ ಭಾಷಾ ವೈವಿಧ್ಯ’ ಕುರಿತ ವಿಶೇಷ ವರದಿಯಲ್ಲಿ ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆ ಇದೆ ಎಂಬ ಅಂಶದ ಕುರಿತು ಅವರು ಈ ಹೇಳಿಕೆ ನೀಡಿದ್ದಾರೆ.

‘ಲೇಖನದಲ್ಲಿ ರಾಜ್ಯ ಹಾಗೂ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಂಬಾಣಿ ಭಾಷೆ ಮಾತನಾಡುವ ಜನರಿದ್ದು ಈ ಭಾಷೆಗೆ ರಾಜ್ಯಭಾಷಾ ಸ್ಥಾನಮಾನ ಲಭಿಸಬೇಕು ಎಂಬ ಒಳ್ಳೆಯ ಉದ್ದೇಶವನ್ನು ಸಂಶೋಧಕರು ಹೊಂದಿದ್ದಾರೆ. ವರದಿಯಲ್ಲಿನ ಸಮುದಾಯದ ಜನಸಂಖ್ಯೆ 2011ರ ಜನಗಣತಿಯನ್ನು ಆಧರಿಸಿದೆ. ಜಾತಿ ಅಂಕಿ ಅಂಶವು ಸಂಶೋಧಕರು ಹೇಳುವಂತೆ ಭಾಷೆಗೆ ಸೀಮಿತವಾದ ಅಧ್ಯಯನವಾಗಿದೆಯೇ ಹೊರತು ರಾಜ್ಯ ಮತ್ತು ದೇಶದಲ್ಲಿ ಬಂಜಾರ ಜನಸಂಖ್ಯೆಗೆ ಸಂಬಂಧಿಸಿದ ಅಧ್ಯಯನವಲ್ಲ. ಹೀಗಾಗಿ, ಸಮುದಾಯದವರು ಆತಂಕ ಪಡುವ ಅಗತ್ಯವಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT