ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನ ವಿಷಯಗಳ ಅಭ್ಯಾಸ ಪುಸ್ತಕ ಬಿಡುಗಡೆ

Published 17 ಜೂನ್ 2024, 15:58 IST
Last Updated 17 ಜೂನ್ 2024, 15:58 IST
ಅಕ್ಷರ ಗಾತ್ರ

ಕಲಬುರಗಿ: ನಗರದ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ವಿಜ್ಞಾನ ವಿಷಯಗಳ ಅಭ್ಯಾಸ ಪುಸ್ತಕ ಬಿಡುಗಡೆ ಸಮಾರಂಭ ನೆರವೇರಿತು.

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪುಸ್ತಕಗಳನ್ನು ಮುಖ್ಯ ಅತಿಥಿಗಳಾಗಿದ್ದ ಕೆ.ಬಿ.ಎನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಶಾಲದತ್ತ ಕೊಹಿರ್, ಆರ್.ಜೆ. ಕಾಲೇಜಿನ ಪ್ರಾಚಾರ್ಯ ಭುರ್ಲಿ ಪ್ರಹ್ಲಾದ, ಜ್ಯೋತಿ ಪಿ. ಭುರ್ಲಿ, ವೀರೇಶ ಕುಲಕರ್ಣಿ, ಶರಣಪ್ಪ ಬಬಲೇಶ್ವರ ಬಿಡುಗಡೆ ಮಾಡಿದರು.

ವಿಶಾಲದತ್ತ ಕೊಹಿರ್ ಮಾತನಾಡಿ, ‘ಈ ಅಭ್ಯಾಸ ಪುಸ್ತಕಗಳು ಭುರ್ಲಿ ಅವರ ಮೂವತ್ತು ವರ್ಷಗಳ ತಪಸ್ಸಿನ ಫಲವಾಗಿದೆ. ಪುಸ್ತಕಗಳು ರಚನಾತ್ಮಕವಾಗಿ ಮೂಡಿ ಬಂದಿವೆ. ಅವು ವಿದ್ಯಾರ್ಥಿಗಳ ಭವಿಷ್ಯದ ದಡವನ್ನು ಸೇರಲು ಸಹಾಯವಾಗುತ್ತವೆ‘ ಎಂದರು.

ಅಧ್ಯಕ್ಷತೆ ವಹಿಸಿದ್ದ ಭುರ್ಲಿ ಪ್ರಹ್ಲಾದ ಮಾತನಾಡಿ, ‘ಕಲ್ಯಾಣ ಕರ್ನಾಟಕದ ಅವಶ್ಯಕತೆಗೆ ಅನುಗುಣವಾಗಿ ಪುಸ್ತಕಳನ್ನು ವಿನ್ಯಾಸಗೊಳಿಸಿರುವುದರಿಂದ ವಿದ್ಯಾರ್ಥಿಗಳು ಪುಸ್ತಕಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇದು ವಿದ್ಯಾರ್ಥಿಗಳಿಗೆ ಒತ್ತಡವಿಲ್ಲದೇ ವಿಷಯವನ್ನು ಓದಲು ಸಹಾಯ ಮಾಡುತ್ತದೆ’ ಎಂದು ಹೇಳಿದರು.

ವಿಷಯ ಉಪನ್ಯಾಸಕರುಗಳಾದ ಕೇದಾರ ದೀಕ್ಷಿತ್, ಪ್ರಕಾಶ ಕಾಂತೀಕರ, ವೈಶಾಲಿ ದೇಶಪಾಂಡೆ, ಡಿ ಕೊಂಡಲರಾವ್ ಪುಸ್ತಕ ಕುರಿತು ಅನಿಸಿಕೆಗಳನ್ನು ಹೇಳಿದರು.

ವಿದ್ಯಾರ್ಥಿನಿಯರಾದ ತ್ರಿವೇಣಿ, ವರ್ಷಾ, ವಾಣಿಶ್ರೀ ಮತ್ತು ಅಂಬಿಕಾ ಪ್ರಾರ್ಥನೆ ಗೀತೆ ಹಾಡಿದರು.

ನಿರೂಪಣೆಯನ್ನು ಮಳೇಂದ್ರ ಹಿರೇಮಠ ನಡೆಸಿಕೊಟ್ಟರು. ಚಂದ್ರಭಾನು ವಂದನಾರ್ಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT