ಕಲಬುರಗಿ: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಾಂಘಿಕ ಆಟವಾಡಿದ ರೌಜಾ ಸ್ಟಾರ್ಸ್ ತಂಡವು 8ನೇ ಆವೃತ್ತಿಯ ಕೆಬಿಎನ್ ಪ್ರೀಮಿಯರ್ ಲೀಗ್ ಟಿ–20 ಕ್ರಿಕೆಟ್ ಟೂರ್ನಿಯ ಫೈನಲ್ ಸುತ್ತಿಗೆ ಲಗ್ಗೆಯಿಟ್ಟಿತು.

ನಗರದ ಸಂತ್ರಾಸವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 21 ರನ್ಗಳಿಂದ ಗಂಗಾವತಿ ಲಯನ್ಸ್ ತಂಡವನ್ನು ಮಣಿಸಿತು.

ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ರೌಜಾ ಸ್ಟಾರ್ಸ್ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 174 ರನ್ಗಳನ್ನು ಪೇರಿಸಿತು. ತಂಡದ ನಾಯಕ ಮೊಹ್ಮದ್ ಮುನೀರ್ (41 ರನ್), ಆದರ್ಶ ಎಂ. (48 ರನ್) ಉತ್ತಮ ಆರಂಭ ನೀಡಿದರು. ಯುನೂಸ್ ಬೇಗ್ (34 ರನ್), ಫೈಜಾನ್ ರೈಜ್ (24 ರನ್) ತಂಡದ ಮೊತ್ತ ಹಿಗ್ಗಿಸಿದರು.

175 ರನ್ಗಳ ಗುರಿ ಬೆನ್ನಟ್ಟಿದ ಗಂಗಾವತಿ ಲಯನ್ಸ್ ತಂಡವು ವಿಕ್ಕಿ ಅತವಾಳ ಮಾರಕ ಬೌಲಿಂಗ್ (28ಕ್ಕೆ 5) ದಾಳಿಗೆ ತತ್ತರಿಸಿತು. 19.2 ಓವರ್ಗಳಲ್ಲಿ 153 ರನ್ಗಳಿಗೆ ಆಲೌಟ್ ಆಯಿತು.

ಎಲಿಮಿನೇಟರ್: ಇದಕ್ಕೂ ಮುನ್ನ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮಾರ್ಕೆಟ್ ಸೂಪರ್ ಕಿಂಗ್ಸ್ ತಂಡವು ಏಳು ವಿಕೆಟ್ಗಳಿಂದ ಮೋಮಿನ್ಪುರ ಮಾಸ್ಟರ್ ವಿರುದ್ಧ ಜಯಿಸಿ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದಿದೆ.

2ನೇ ಕ್ವಾಲಿಫೈಯರ್ ಇಂದು: ಟೂರ್ನಿಯ 2ನೇ ಕ್ವಾಲಿಫೈಯರ್ ಪಂದ್ಯ ಬುಧವಾರ ಸಂಜೆ 6.30ಕ್ಕೆ ನಿಗದಿಯಾಗಿದೆ. ಗಂಗಾವತಿ ಲಯನ್ಸ್ ಮತ್ತು ಮಾರ್ಕೆಟ್ ಸೂಪರ್ ಕಿಂಗ್ಸ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಸೆಣಸಲಿವೆ. ಇಲ್ಲಿ ಗೆಲ್ಲುವ ತಂಡವು ಫೆಬ್ರುವರಿ 5ರಂದು ನಡೆಯಲಿರುವ ಟೂರ್ನಿಯ ಫೈನಲ್ನಲ್ಲಿ ರೌಜಾ ಸ್ಟಾರ್ಸ್ ಸವಾಲು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.