ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಶಾಲೆಗಳಲ್ಲಿ ಮತ್ತೆ ಆರಂಭವಾದ ಚಿಣ್ಣರ ಕಲರವ

Last Updated 25 ಅಕ್ಟೋಬರ್ 2021, 6:25 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಎಲ್ಲ 772 ಶಾಲೆಗಳಲ್ಲೂ 1ರಿಂದ 5ನೇ ತರಗತಿಗಳು ಸೋಮವಾರ ಆರಂಭವಾದವು. ಬಹುಪಾಲು ಶಾಲೆಗಳಲ್ಲಿ ಮೊದಲ ದಿನವೇ ಮಕ್ಕಳ ಉತ್ತಮ ಹಾಜರಾತಿ ಕಂಡುಬಂತು. ಎರಡು ವರ್ಷಗಳ ನಂತರ ಶಾಲೆಗಳಲ್ಲಿ ಚಿಣ್ಣರ ಕಲರವ ಕೇಳಿಸಿತು.

ಬೆಳಿಗ್ಗೆ 10ರ ಸುಮಾರಿಗೆ ಪಾಲಕರು ತಮ್ಮ ಮಕ್ಕಳನ್ನು ಶಾಲೆಗಳತ್ತ ಕರೆತಂದರು. ಆವರಣದಲ್ಲಿ ರಾಷ್ಟ್ರಗೀತೆ ಹಾಡಿದ ಬಳಿಕ ಮಕ್ಕಳು ತರಗತಿಗಳತ್ತ ಓಡಿದರು.

ಹಲವು ಕಡೆ ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕಾರ ಮಾಡಿ, ಶಿಕ್ಷಕರು ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದರು.

ಮತ್ತೆ ಕೆಲವು ಖಾಸಗಿ ಶಾಲೆಗಳಲ್ಲಿ ಪುಟಾಣಿಗಳಿಗೆ ಪುಷ್ಪಾರ್ಚನೆ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಯಿತು.

ಬಹಳ ದಿನಗಳ ನಂತರ ಗೆಳೆಯರೊಂದಿಗೆ ಬೆರೆತ ಪುಟಾಣಿಗಳು ಆಟವಾಡಿ ನಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT