ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿವೈಸ್‌ ಮೂಲಕ ಇಂಗ್ಲಿಷ್‌ ಭಾಷಾ ಕಲಿಕೆ’

Last Updated 2 ಅಕ್ಟೋಬರ್ 2021, 1:58 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಕ್ಕಳು ಹಿಂಜರಿಕೆ, ಕೀಳರಿಮೆ ಇಲ್ಲದೇ ಇಂಗ್ಲಿಷ್‌ ಕಲಿಯುವಂಥ ತಂತ್ರಜ್ಞಾನ ಅಧಾರಿತ ಕಲಿಕಾ ವಿಧಾನವನ್ನು ಬೆಂಗಳೂರು ಮೂಲದ ಲರ್ನಿಂಗ್‌ ಮ್ಯಾಟರ್ಸ್‌ ಸಂಸ್ಥೆ ಹೊರತಂದಿದೆ. ಕಲ್ಯಾಣ ಕರ್ನಾಟಕ ಭಾಗದ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳಿಗೆ ಇದನ್ನು ಪರಿಚಯಿಸಲಾಗುತ್ತಿದೆ’ ಎಂದು ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಗೌರಿ ಮಹೇಶ ಹೇಳಿದರು.

‘ಒಂದು ಸಣ್ಣ ಡಿವೈಸ್‌ ಮೂಲಕ ಇಂಗ್ಲಿಷ್‌ ಪಾಠ ಮಾಡುವ ವಿನೂತನ ವಿಧಾನ ಇದಾಗಿದೆ. ಇದಕ್ಕೆ ‘ಧ್ವನಿ ಶಿಕ್ಷಕಿ ತಾರಾ’ ಎಂದು ಹೆಸರಿಟ್ಟಿದ್ದು, ಮಕ್ಕಳು ಡಿವೈಸ್‌ ಆನ್‌ ಮಾಡಿಕೊಂಡು, ತಮಗೆ ಬೇಕಾದ ರೀತಿಯಲ್ಲಿ ಇಂಗ್ಲಿಷ್‌ ಕಲಿಯಬಹುದು. ಮಕ್ಕಳೊಂದಿಗೆ ಸುಲಭ ಸಂಭಾಷಣೆ, ವ್ಯಾಕರಣ, ವಾಕ್ಯರಚನೆ, ಶಬ್ದಸಂಗ್ರಹ, ಪ್ರಶ್ನೋತ್ತರ... ಹೀಗೆ ವಿವಿಧ ಮಾದರಿಯಲ್ಲಿ ಈ ‘ತಾರಾ’ ಡಿವೈಸ್‌ ಪಾಠ ಮಾಡುತ್ತದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇಂಗ್ಲಿಷ್‌ ಮಾತನಾಡಲು ಹಿಂಜರಿಕೆ ಪಡುವ ಮಕ್ಕಳು ಹೆಚ್ಚಿದ್ದಾರೆ. ತರಗತಿಯಲ್ಲಿ ಇದ್ದಾಗ ಕೂಡ ತಪ್ಪಾಗಿ ಮಾತನಾಡುತ್ತೇವೆ ಎಂಬ ಭಯದಿಂದ ಹಿಂದೆ ಉಳಿಯುವ ಸಾಧ್ಯತೆ ಕೂಡ ಇದೆ. ಈ ಹಿಂಜರಿಕೆ ಹೋಗಲಾಡಿಸಿ, ಮಕ್ಕಳು ಸುಲಭವಾಗಿ ಇಂಗ್ಲಿಷ್‌ ಕಲಿಯುವಂತೆ ಮಾಡುವುದು ಇದರ ಉದ್ದೇಶ. ಇಲ್ಲಿ ಮಕ್ಕಳನ್ನು ಯಾರೂ ತೆಗಳುವುದು, ಗೇಲಿ ಮಾಡುವುದು ಸಾಧ್ಯವಿಲ್ಲ. ಅವರಿಗೆ ಬೇಕಾದ ಆತ್ಮೀಯ ಸಂಭಾಷಣೆಯನ್ನು ಡಿವೈಸ್‌ನಲ್ಲಿ ಮೂಡಿಸಲಾಗಿದೆ’ ಎಂದರು.

‘ಈಗಾಗಲೇ ಮಹಾರಾಷ್ಟ್ರ, ತೆಲಂಗಾಣ, ಕೆರಳ, ಜಾರ್ಖಂಡ, ಆಂಧ್ರ ಹಾಗೂ ದಕ್ಷಿಣ ಕರ್ನಾಟಕ ಕೆಲ ಭಾಗಗಳಲ್ಲೂ ಇದನ್ನು ಪರಿಚಯಿಸಲಾಗಿದೆ. ಈವೆಗೆ 20 ಸಾವಿರ ಮಕ್ಕಳು ಲಾಭ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ನೀಡುವ ಉದ್ದೇಶವಿದೆ. ಡಿವೈಸ್‌ ಜತೆಗೆ ಒಂದು ವರ್ಕ್‌ಬುಕ್‌ ಕೂಡ ನೀಡಲಾಗುತ್ತದೆ. ಒಂದು ವರ್ಷಕ್ಕೆ ₹ 1200 ಶುಲ್ಕವಿದ್ದು, ಡಿವೈಸ್‌ ಅನ್ನು ಸಂಸ್ಥೆಯಿಂದ ಉಚಿತವಾಗಿ ನೀಡಲಾಗುತ್ತದೆ. ಶಿಕ್ಷಕರೂ ಇದನ್ನು ವೈಯಕ್ತಿಕ ಕಲಿಕೆಗೆ ಬಳಸಿಕೊಳ್ಳಬಹುದು’ ಎಂದೂ ಹೇಳಿದರು.

ಹೆಚ್ಚಿನ ಮಾಹಿತಿಗೆ 9880548428, 8431865509 ಸಂಪರ್ಕಿಸಲು ಕೋರಿದರು.

ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ರಾಮಮೂರ್ತಿ ಜಿ, ಶ್ರೀರಂಜಿನಿ, ಎಸ್.ಎಸ್. ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT