ಕಲಬುರ್ಗಿ: ಹಿರಿಯ ರಂಗಕಲಾವಿದೆ, ರಂಗ ನಿರ್ದೇಶಕಿ ಹಾಗೂ ಚಿತ್ರನಟಿ ಶೋಭಾ ರಂಜೋಳಕರ್ (67) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಇಬ್ಬರು ಪುತ್ರರು ಇದ್ದಾರೆ.

ಮೂಲತಃ ತೆಲಂಗಾಣದ ಕೋಡಂಗಲ್ ನವರಾದ ಶೋಭಾ ಅವರನ್ನು ಸೇಡಂನ ರಂಜೋಳದ ಎಂಜಿನಿಯರ್ ಭೀಮರಾವ ಕುಲಕರ್ಣಿ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಅಂದಿನಿಂದ ತಮ್ಮ ಮನೆತನದ ಹೆಸರನ್ನು ರಂಜೋಳಕರ ಎಂದು ಕರೆಸಿಕೊಂಡರು.

ರಂಗಮಾಧ್ಯಮ ಕಲಾತಂಡ ಹಾಗೂ ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ನಾಟಕಗಳನ್ನು ನಿರ್ಮಿಸಿ ಅಭಿನಯಿಸಿದ್ದಾರೆ. ಕಳೆದ ವರ್ಷ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಎಲ್ಲ 35 ಪಾತ್ರಗಳಲ್ಲಿ ಮಹಿಳೆಯರೇ ಇದ್ದ 'ಯುದ್ಧ ಭಾರತ' ನಾಟಕವನ್ನು ಪ್ರದರ್ಶಿಸಿದ್ದರು.

ಡಾ.ಚಂದ್ರಶೇಖರ ಕಂಬಾರರೊಂದಿಗೆ ʼಬೆಳದಿಂಗಳಾಗಿ ಬಾʼ ಸೇರಿದಂತೆ ಮಹಾದಾಸೋಹಿಶರಣಬಸವೇಶ್ವರ, ಗೌತಮ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಖರೋಖರ, ಅನೆಬಂತಾನೆ, ಹರಕೆ ಕುರಿ, ಕೇಳು ಜನಮೇಜಯ, ಶಾಂತತಾ ಕೋರ್ಟ ಚಾಲೂ ಆಹೆ, ಆಧುನಿಕ ದ್ರೋಣ, ಕಾಡುಕುದುರೆ, ಶರಣು ಶರಣಾರ್ಥಿ, ನಾಪತ್ತೆಯಾದ ಪ್ರೇಮಪ್ರಸಂಗ, ಮಾತನಾಡುವ ಟೊಂಗೆಗಳು, ನೆಳಲಿಯ ಪ್ರಸಂಗ, ಜೈಸಿದನಾಯಕ, ಓಕಳಿ, ಅಮೀನಪುರದ ಸಂತೆ, ಗ್ರಹಣ, ಹುಲಿಯ ನೆರಳು, ಹಾಸ್ಯ ತರಂಗ, ಅಳಿಯನ ಅವಾಂತರ, ಜೀವನಚಕ್ರ, ಜೀವನ ಸಂಘರ್ಷ, ಲಕ್ಕವ್ವನ ಮಂದಿ, ಸ್ತ್ರೀಲೋಕ ಮತ್ತಿತರ ನಾಟಕಗಳಲ್ಲಿ ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.