ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ.ಕ ಭಾಗದಲ್ಲಿ 58 ಪಶು ಆಂಬುಲೆನ್ಸ್‌ಗಳ ಸೇವೆ

Published 8 ಡಿಸೆಂಬರ್ 2023, 15:57 IST
Last Updated 8 ಡಿಸೆಂಬರ್ 2023, 15:57 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ 58 ಆಂಬುಲೆನ್ಸ್‌ಗಳು ಸೇರಿ ರಾಜ್ಯದಲ್ಲಿ 275 ಸಂಚಾರಿ ಪಶುಚಿಕಿತ್ಸಾ ಘಟಕದ ವಾಹನಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ ತಿಳಿಸಿದ್ದಾರೆ.

ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್‌ ವಲ್ಯಾಪುರೆ ಅವರ ಸಂಖ್ಯೆಗೆ ಲಿಖಿತವಾಗಿ ಸಚಿವರು ಉತ್ತರ ನೀಡಿದ್ದಾರೆ.

‘ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಪಶುಚಿಕಿತ್ಸಾ ಸೇವೆಗಳಿಗಾಗಿ 3,898 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ ಎಲ್ಲ ದೂರುಗಳಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ರಾಜ್ಯದಲ್ಲಿ ಕುರಿಗಳು ಸಾವಿಗೀಡಾದ ಪ್ರಕರಣದಲ್ಲಿ ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿದೆ. 3 ರಿಂದ 6ತಿಂಗಳ ಮರಿಗಳಿಗೆ ₹ 3,500, 6 ತಿಂಗಳ ಮೇಲ್ಪಟ್ಟ ಕುರಿ/ ಮೇಕೆಗಳಿಗೆ ₹ 5 ಸಾವಿರ ಪರಿಹಾರ ಧನ ನೀಡಲು ಕ್ರಮವಹಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT