ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಿಷಯದಲ್ಲಿ ರಾಜಕೀಯ ಬೆರೆಸುವುದಿಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ಕಾನೂನು ಮತ್ತು ಸಂಸದೀಯ ವ್ಯವಹಾರ
Last Updated 6 ಜನವರಿ 2021, 4:35 IST
ಅಕ್ಷರ ಗಾತ್ರ

ಅಫಜಲಪುರ: ‘ರಾಜ್ಯದ ರೈತರಿಗಾಗಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಆರ್ಥಿಕವಾಗಿ ಬಲಿಷ್ಠವಾಗಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮ ಸರ್ಕಾರ ರೈತರ ವಿಷಯದಲ್ಲಿ ರಾಜಕೀಯ ಬೆರೆಸುವುದಿಲ್ಲ’ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

₹ 72 ಕೋಟಿ ಅಂದಾಜು ವೆಚ್ಚದ ತಾಲ್ಲೂಕಿನ ಘೂಳನೂರ ಹಾಗೂ ಮೊಗನ ಇಟಗಾ ಗ್ರಾಮಗಳ ಹತ್ತಿರದ ಭೀಮಾನದಿಗೆ ಬ್ಯಾರೇಜ್ ಕಂ ಬ್ರಿಜ್‌ಗೆ ಮಂಗಳವಾರ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಆಗಿರುವ ಭೀಮಾಪ್ರವಾಹದಿಂದ ಕೆರೆ ಕಟ್ಟೆಗಳಿಗೆ, ಸೇತುವೆಗಳಿಗೆ ಆಗಿರುವ ಹಾನಿಯನ್ನು ಅಂದಾಜು ಮಾಡಿ ವರದಿ ತಯಾರಿಸಿ ಆದ್ಯತೆ ಪ್ರಕಾರ ಕೆಲಸ ಕಾರ್ಯಗಳು ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಘೂಳನೂರ ಹತ್ತಿರ ಬ್ಯಾರೇಜ್‌ ಕಂ ಬ್ರಿಜ್ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗಿದ್ದು, ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಇದನ್ನು ಮಂಜೂರು ಮಾಡಿಸಲು ಶಾಸಕ ಎಂ.ವೈ.ಪಾಟೀಲ ನನ್ನ ಹತ್ತಿರ ಬಹಳಷ್ಟು ಸಾರಿ ಬಂದಿದ್ದಾರೆ. ನಾನು ಕೆಲಸ ಮಾಡಿಕೊಡುತ್ತೇನೆ. ಆದರೂ ಒಂದು ಮಾತು ಕೇಳಿ ಎಂದಾಗ ಪಾಟೀಲರು ಮುಖ್ಯಮಂತ್ರಿಗಳಿಂದ ಯೋಜನೆಗೆ ಶಿಫಾರಸು ಮಾಡಿಸಿದರು. ಜೇವರ್ಗಿ ಮತ್ತು ಅಫಜಲಪುರ ತಾಲ್ಲೂಕಿನ ಗ್ರಾಮಗಳಿಗೆ ಇದು ಅನುಕೂಲವಾಗಲಿದೆ. ಇದರ ಉಪಯೋಗ ಈ ಭಾಗದ ರೈತರು ಪಡೆಯಬೇಕು’ ಎಂದು ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ. ಅಜಯ್ ಸಿಂಗ್ ಮಾತನಾಡಿ, ‘ಜೇವರ್ಗಿ ತಾಲ್ಲೂಕಿನಲ್ಲಿ 22 ಕೆರೆಗಳನ್ನು ತುಂಬಲು ₹ 250 ಕೋಟಿ ತಾಂತ್ರಿಕ ಮಂಡಳಿಯಿಂದ ಅನುಮತಿ ಪಡೆದಿದ್ದು, ಆಡಳಿತಾತ್ಮಕ ಮಂಜೂರಾತಿ ಪಡೆಯಬೇಕಾಗಿದೆ. ಅದಕ್ಕಾಗಿ ಜೆ.ಸಿ.ಮಾಧುಸ್ವಾಮಿಯವರು ಸಹಕಾರ ನೀಡಬೇಕು ಎಂದು ಕೇಳಿದ್ದೇನೆ. ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಎಂದಿದ್ದಾರೆ. ಆದರೆಯಡಿಯೂರಪ್ಪನವರಿಗಿಂತ ಮಾಧುಸ್ವಾಮಿಯವರೇ ಸೂಪರ್ ಸಿ.ಎಂ. ಆಗಿದ್ದಾರೆ’ ಎಂದು ಚಟಾಕಿ ಹಾರಿಸಿದರು.

ಅಫಜಲಪುರ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ‘ತಾಲ್ಲೂಕಿನ ಬೋರಿ ಮತ್ತು ಅಮರ್ಜಾ ನದಿಗಳಿಗೆ ನಿರ್ಮಿಸಿರುವ ಬ್ಯಾರೇಜ್‌ ಗೇಟ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳಿಗೆ ವೈಜ್ಞಾನಿಕ ರೀತಿಯ ಗೇಟ್‌ಗಳನ್ನು ಅಳವಡಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಸುಲಫಲ ಮಠದ ಸಾರಂಗದರ ದೇಶಿಕೇಂದ್ರ ಶಿವಾಚಾರ್ಯರು, ಅತನೂರಿನ ಅಭಿನವ ಗುರುಬಸವ ಶಿವಾಚಾರ್ಯರು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ,ಸದಸ್ಯರಾದ ಅರುಣಕುಮಾರಗೌಡ ಪಾಟೀಲ, ದಿಲೀಪ ಪಾಟೀಲ,ವಿಧಾನ್ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ, ಮುಖಂಡರಾದ ಮಕ್ಬುಲ್ ಪಟೇಲ, ಪಪ್ಪು ಪಟೇಲ, ದಯಾನಂದ ದೊಡ್ಡಮನಿ, ಶಿವಾನಂದ ಗಾಡಿ ಸಾಹುಕಾರ, ಶಿವಶರಣಪ್ಪ ಹೀರಾಪುರ, ರತ್ನವ್ವ ಭೀರಣ್ಣಾ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT