ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ, ಪ್ರಿಯಾಂಕಾ, ರೇವಂತ್ ರೆಡ್ಡಿ ಇಂದು ಸೇಡಂಗೆ

ಮಧ್ಯಾಹ್ನ 2.30ಕ್ಕೆ ತಾಲ್ಲೂಕು ಸ್ಟೇಡಿಯಂನಲ್ಲಿ ರಾಧಾಕೃಷ್ಣ ಪರ ಪ್ರಚಾರ ಸಭೆ
Published 29 ಏಪ್ರಿಲ್ 2024, 4:22 IST
Last Updated 29 ಏಪ್ರಿಲ್ 2024, 4:22 IST
ಅಕ್ಷರ ಗಾತ್ರ

ಕಲಬುರಗಿ: ಇದೇ 29ರಂದು ಮಧ್ಯಾಹ್ನ 2.30ಕ್ಕೆ ಸೇಡಂ ಪಟ್ಟಣದ ಸ್ಟೇಡಿಯಂನಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಪ್ರಚಾರ ಸಭೆಯನ್ನು ಆಯೋಜಿಸಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಭಾಗವಹಿಸಲಿದ್ದಾರೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಜಾರಿಗೆ ತರುವ ಗ್ಯಾರಂಟಿ ಯೋಜನೆಗಳ ಕಾರ್ಡ್ ಕೊಡಲು ಹೋದಾಗ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಲಬುರಗಿಯಲ್ಲಿ ಈಗಾಗಲೇ ಪಕ್ಷದ ಅಭ್ಯರ್ಥಿಯ ಗೆಲುವು ಸ್ಪಷ್ಟವಾಗಿದೆ. ಆದರೂ, ಕಾರ್ಯಕರ್ತರು ಜನರ ಮಧ್ಯೆ ಇರಬೇಕು’ ಎಂದರು.

ಮಧ್ಯಾಹ್ನ 12ಕ್ಕೆ ಗುರುಮಠಕಲ್ ಪಟ್ಟಣದಲ್ಲಿ ಅಭ್ಯರ್ಥಿಯ ಪರ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರೇವಂತ್ ರೆಡ್ಡಿ ಅವರು ಭಾಗವಹಿಸುತ್ತಿದ್ದು, ಸೇಡಂನಲ್ಲಿ ಇಬ್ಬರು ನಾಯಕರಲ್ಲದೇ ಪ್ರಿಯಾಂಕಾ ಗಾಂಧಿಯವರೂ ಭಾಗವಹಿಸುವರು. 25 ಸಾವಿರಕ್ಕೂ ಅಧಿಕ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಹಿಂದಿನ ಯಾವ ಪ್ರಧಾನಿಯೂ ಮೋದಿ ಅವರಷ್ಟು ಕೀಳುಮಟ್ಟಕ್ಕಿಳಿದು ಮಾತನಾಡಿರಲಿಲ್ಲ. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಮಹಿಳೆಯರ ಮಂಗಳಸೂತ್ರ ಕಿತ್ತುಕೊಳ್ಳಲಿದೆ ಎಂಬ ಹೇಳಿಕೆ ನೀಡಿದ್ದಾರೆ
ಡಾ. ಶರಣಪ್ರಕಾಶ ಪಾಟೀಲ ಸಚಿವ

ಚಿಂಚೋಳಿ ಎಂಪಿ: ಸಂಸದ ಡಾ. ಉಮೇಶ ಜಾಧವ ಅವರು ಐದು ವರ್ಷಗಳಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರದ ಜನರನ್ನು ಭೇಟಿ ಮಾಡಿಲ್ಲ. ಒಂದು ಸಭೆ ನಡೆಸಿಲ್ಲ. ಜನರ ಕಷ್ಟಗಳನ್ನು ಆಲಿಸಿಲ್ಲ. ಅವರು ಚಿಂಚೋಳಿಗೆ ಮಾತ್ರ ಎಂಪಿ ಆಗಿದ್ದರು ಎಂದು ಶರಣಪ್ರಕಾಶ್ ಟೀಕಿಸಿದರು.

ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಂಸತ್ತಿನಲ್ಲಿಯೂ ಅವರು ಧ್ವನಿ ಎತ್ತಲಿಲ್ಲ. ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ಒಂದು ಯೋಜನೆಯನ್ನೂ ತರಲಿಲ್ಲ ಎಂದು ಹರಿಹಾಯ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT