ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಾಜಿ ಆದರ್ಶ ಆಡಳಿತಗಾರ: ಪ್ರಭಾಕರ ಸಲಗರೆ

Published 20 ಫೆಬ್ರುವರಿ 2024, 4:17 IST
Last Updated 20 ಫೆಬ್ರುವರಿ 2024, 4:17 IST
ಅಕ್ಷರ ಗಾತ್ರ

ಆಳಂದ: ‘ಛತ್ರಪತಿ ಶಿವಾಜಿ ಮಹಾರಾಜರು ಆದರ್ಶ ಆಡಳಿತಗಾರರಾಗಿ ಬಹುಜನರಿಗೆ ಹಿತವಾಗುವ ಸ್ವರಾಜ್ಯ ಸ್ಥಾಪಿಸಿದರು’ ಎಂದು ಮರಾಠಿ ಪತ್ರಕರ್ತ ಪ್ರಭಾಕರ ಸಲಗರೆ ತಿಳಿಸಿದರು. ತಾಲ್ಲೂಕು ಆಡಳಿತ ಭವನದಲ್ಲಿ ಸೋಮವಾರ ಆಳಂದ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿವಾಜಿಯು ಧೈರ್ಯ, ಸಾಹಸ ಮತ್ತು ಸಂಘಟನೆಯ ಗುಣಗಳಿಗೆ ಹೆಸರುವಾಸಿ ರಾಜನಾಗಿದ್ದನು, ಅವರ ರಾಜ್ಯ ಸ್ಥಾಪನೆಯಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದರು, ಅಷ್ಠಪ್ರಧಾನರು, ರೈತವಾರಿ ಪದ್ದತಿಯಂತಹ ಹೊಸ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದ ಶಿವಾಜಿಯು ಎಲ್ಲ ಜನರ ಮೆಚ್ಚುಗೆ ಪಡೆದಿದ್ದರು’ ಎಂದರು.

ತಹಶೀಲ್ದಾರ್‌ ಸುರೇಶ ಅಂಕಲಗಿ, ಬಿಜೆಪಿ ಮುಖಂಡ ಸಂಜಯ ಮಿಸ್ಕಿನ್‌ ಮಾತನಾಡಿದರು. ಮರಾಠ ಸಮಾಜದ ತಾಲ್ಲೂಕಾಧ್ಯಕ್ಷ ನರೇಶ ಭೋಸ್ಲೆ, ಸಂಜಯ ಇಂಗಳೆ, ಪ್ರಕಾಶ ಮಾನೆ, ರಾಹುಲ ಚಿಟ್ಟೆಕರ್‌, ದತ್ತಾ ಬಾಬರೆ, ಮನೋಹರ ಮಾನೆ, ಮಲ್ಲಿನಾಥ ಭೋಸ್ಲೆ, ಭರತ್‌ ಇಸ್ರಾಜಿ, ರಾಹುಲ ಅಳಂಗೆ, ಶಂಕರ ಸೂರವಸೆ, ಶರಣಬಸಪ್ಪ ಹಕ್ಕಿ ಉಪಸ್ಥಿತರಿದ್ದರು.

ಮರಾಠ ಸಮಾಜ: ಪಟ್ಟಣದ ಮರಾಠ ಸಮಾಜದ ಕಚೇರಿಯಲ್ಲಿ ಮರಾಠ ಸಮಾಜದಿಂದ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ‘ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಸಾಹಸ ಹಾಗೂ ರಾಷ್ಟ್ರಪ್ರೇಮವು ಯುವಕರಿಗೆ ಸದಾ ಸ್ಫೂರ್ತಿಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿ ಮತ್ತು ಧರ್ಮ ರಕ್ಷಣೆಗೆ ಶಿವಾಜಿ ಜೀವನಪೂರ್ತಿ ಹೋರಾಡಿದ ನಾಯಕರಾಗಿದ್ದಾರೆ’ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಮುಖಂಡರಾದ ಸಂಜಯ ಮಿಸ್ಕಿನ್‌, ಸಮಾಜದ ಅಧ್ಯಕ್ಷ ನರೇಶ್‌ ಭೋಸ್ಲೆ, ಶ್ರೀಶೈಲ ಖಜೂರಿ, ಮಲ್ಲಿಕಾರ್ಜುನ ಕಂದಗೋಳೆ, ರಾಹುಲ ಚಿಟ್ಟೆಕರ್‌, ದತ್ತಾ ಬಾಬರೆ, ಸಂಜಯ ಇಂಗಳೆ ಮತ್ತಿತರರು ಭಾಗವಹಿಸಿದ್ದರು.

ತಾಲ್ಲೂಕಿನ ತಡೋಳಾ, ಕಿಣಿಸುಲ್ತಾನ, ಜವಳಗಾ(ಜೆ), ಜಮಗಾ ಆರ್‌, ಕವಲಗಾ, ಮಾಡಿಯಾಳ, ಪಡಸಾವಳಿ, ಕೊತ್ತನ ಹಿಪ್ಪರಗಾ , ಅಳಂಗಾ, ಹೊದಲೂರು ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ನಡೆಯಿತು. ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲೂ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.

ಆಳಂದದಲ್ಲಿ ಮರಾಠ ಸಮಾಜದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಜರುಗಿತು ಸುಭಾಷ ಗುತ್ತೇದಾರ ನರೇಶ್‌ ಭೋಸಲೆ ಸಂಜಯ ಇಂಗಳೆ ಹಾಜರಿದ್ದರು
ಆಳಂದದಲ್ಲಿ ಮರಾಠ ಸಮಾಜದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಜರುಗಿತು ಸುಭಾಷ ಗುತ್ತೇದಾರ ನರೇಶ್‌ ಭೋಸಲೆ ಸಂಜಯ ಇಂಗಳೆ ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT