ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಸಂಭ್ರಮದ ಶಿವಲಿಂಗೇಶ್ವರ ರಥೋತ್ಸವ

Last Updated 17 ಫೆಬ್ರುವರಿ 2021, 4:06 IST
ಅಕ್ಷರ ಗಾತ್ರ

ಮಾದನ ಹಿಪ್ಪರಗಾ (ಆಳಂದ): ತಾಲ್ಲೂಕಿನ ಮಾದನ ಹಿಪ್ಪರಗಾದ ಶರಣ ಶಿವಲಿಂಗೇಶ್ವರರ 116ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಮಂಗಳವಾರ ಸಂಭ್ರಮದಿಂದ ಜರುಗಿತು.

ಅಪಾರ ಭಕ್ತರ ಮಧ್ಯೆಶರಣ ಶಿವಲಿಂಗೇಶ್ವರ ಮಠದಲ್ಲಿ ಬೆಳಿಗ್ಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಗ್ರಾಮದ ಮುಖ್ಯಬೀದಿಗಳಲ್ಲಿ ಸಾಗಿ ಬಂದ ಉತ್ಸವದಲ್ಲಿ ಪುರವಂತರ ಕುಣಿತ, ಒಡಪು ಹೇಳುವ ಶೈಲಿ ಗಮನ ಸೆಳೆಯಿತು. ಪಟಾಕಿ ಸದ್ದು, ಹಲಗೆ ಮತ್ತಿತರ ವಾದ್ಯಗಳ ವಾದನ ಉತ್ಸವಕ್ಕೆ ಮೆರುಗು ನೀಡಿತು.

ಸಂಜೆ ಅಪಾರ ಭಕ್ತರ ಶ್ರದ್ಧೆ– ಭಕ್ತಿಯ ನಡುವೆ ಮಹಾರಥೋತ್ಸವವು ಜರುಗಿತು. ಭಕ್ತರು ರಥ ಎಳೆದು ಸಂಭ್ರಮಿಸಿದರು.

ರಥ ಸಾಗಿದ ದಾರಿಯ ಇಕ್ಕೆಲದಲ್ಲಿ ಸೇರಿದ ಭಕ್ತರು ಉತ್ತತ್ತಿ, ಅಳ್ಳು, ಬಾಳೆಹಣ್ಣು, ಶೇಂಗಾ, ಫಲ–ಪುಷ್ಪ ಸಮರ್ಪಿಸಿ ತಮ್ಮ ಹರಕೆತೀರಿಸಿದರು. ಮಾದನ ಹಿಪ್ಪರಗಾ ಸೇರಿದಂತೆ ನೆರೆಯ ಮಹಾರಾಷ್ಟ್ರದ ಅಕ್ಕಲಕೋಟ, ಮೈಂದರ್ಗಿ, ಹಿತ್ತಲ ಕರಂಜಿಗಿ, ಸೋಲಾಪುರ ಮತ್ತಿತರ ದೂರದ ಭಕ್ತರು ರಥೋತ್ಸವದಲ್ಲಿ
ಪಾಲ್ಗೋಂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT