ಚಿಂಚೋಳಿ: ‘ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತವು, ಈಗ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸಲಿದೆ. ಈಗ ಸಿದ್ಧಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಯಾಗಿ ಪರಿವರ್ತನೆಗೊಂಡಿದ್ದು, ಶೀಘ್ರ ಮಹಾರಾಷ್ಟ್ರದಲ್ಲೂ ಕಾರ್ಯಾರಂಭ ಮಾಡಲಿದೆ’ ಎಂದು ಸಿದ್ಧಸಿರಿ ಸಹಕಾರಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಇಲ್ಲಿನ ಸಿದ್ಧಸಿರಿ ಎಥನಾಲ್ ಕಂಪನಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಿಂಚೋಳಿಯಲ್ಲಿ ಕಂಪನಿ ಖರೀದಿಸುವಾಗ ₹ 1,200 ಕೋಟಿಯಿದ್ದ ಸಿದ್ಧಸಿರಿಯ ಠೇವಣಿ ಈಗ ₹ 4,500 ಕೋಟಿ ತಲುಪಿದೆ. ರಾಜ್ಯದಲಿ 211 ಶಾಖೆಗಳಿದ್ದು, ₹26 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 18ರಷ್ಟು ಲಾಭಾಂಶ ಘೋಷಿಸಿದ್ದೇವೆ. ಇದು ಕರ್ನಾಟಕದಲ್ಲಿಯೇ ಅತಿ ಹೆಚ್ಚು ಲಾಭಾಂಶ ನೀಡಿದ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಿದ್ಧಸಿರಿ ಪಾತ್ರವಾಗಿದೆ’ ಎಂದರು.

11 ತಿಂಗಳು ಎಥೆನಾಲ್ ಉತ್ಪಾದನೆ: ಪ್ರಸಕ್ತ ವರ್ಷ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಘಟಕದಿಂದ 8 ಲಕ್ಷ ಟನ್ ಕಬ್ಬು ನುರಿಸುವ ಗುರಿಯಿದೆ. 2 ಲಕ್ಷ ಟನ್ ಮೆಕ್ಕೆ ಜೋಳ ಹಾಗೂ 80 ಸಾವಿರ ಟನ್ ಅಕ್ಕಿ ನುರಿಸಿ, ವರ್ಷದ 11 ತಿಂಗಳೂ ಎಥೆನಾಲ್ ಉತ್ಪಾದಿಸಲಾಗುವುದು’ ಎಂದು ಹೇಳಿದರು.

ಸಧ್ಯ 30 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ದರ ಆಧರಿಸಿ ಮಾರಾಟ ಮಾಡಲಾಗುತ್ತಿದೆ. ಮಾರುಕಟೆಯಲ್ಲಿ ವಿದ್ಯುತ್ ದರ ಕುಸಿದರೆ ಉತ್ಪಾದನೆ ಬಂದ್ ಮಾಡಿ ಕಂಪನಿಗೆ ಬೇಕಾಗುವಷ್ಟು ಉತ್ಪಾದಿಸುತ್ತೇವೆ. ಹೆಚ್ಚುವರಿಯಾಗಿ ಕಂಪನಿಯಲ್ಲಿ ಸೋಲಾರ ಮೂಲಕ ವಿದ್ಯುತ್ ಉತ್ಪಾದನೆಯೂ ನಡೆದಿದೆ’ ಎಂದರು.

ಕಂಪನಿಯಲ್ಲಿ ಪ್ರತಿದಿನ 5 ಸಾವಿರದಿಂದ 6 ಸಾವಿರ ಟನ್ ಕಬ್ಬು ನುರಿಸಲಾಗುವುದು. ಇದರಿಂದ 4.5 ಲಕ್ಷ ಲೀಟರ್ ಎಥೆನಾಲ್ ಉತ್ಪಾದನೆ ಆಗಲಿದೆ. ಕಬ್ಬು ನುರಿಸಲು 3 ಸಾಲುಗಳಿದ್ದು, ಒಂದು ಸಾಲು ಚಿಂಚೋಳಿ ತಾಲ್ಲೂಕಿನ ಕಬ್ಬು, ಇನ್ನೊಂದು ಸಾಲು ಬೇರೆ ತಾಲ್ಲೂಕುಗಳ ಸಾಲು ಮತ್ತೊಂದು ಅನ್ಯರಾಜ್ಯಗಳ ಕಬ್ಬು ಬಂದರೆ ಅದಕ್ಕೆ ಬಳಸಲಾಗುವುದು’ ಎಂದರು.

ಕಂಪನಿಯಲ್ಲಿ ಒಟ್ಟು 870 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಹೈನೋದ್ಯಮದಲ್ಲಿ ಬಹುದೊಡ್ಡ ಕ್ರಾಂತಿ ನಡೆಯಲಿದೆ’ ಎಂದರು.

ಕಬ್ಬು ಕಟಾವಿಗೆ 35 ವಾಹನಗಳು: ರೈತರ ಕಬ್ಬು ಕಟಾವಿಗೆ 36 ಕಬ್ಬು ಕಟಾವು ಯಂತ್ರಗಳನ್ನು ರೈತರ ಜಮೀನಿಗೆ ಕಳುಹಿಸಲಾಗುತ್ತಿದೆ. ಕಂಪನಿ ವ್ಯಾಪ್ತಿಯ ಎಲ್ಲ 302 ಗ್ರಾಮಗಳ ಕಬ್ಬು ಆದ್ಯತೆ ಮೇಲೆ ನುರಿಸುತ್ತೇವೆ. ನಮ್ಮ ಕಂಪನಿಯಲ್ಲಿ ದಲ್ಲಾಳಿಗಳಿಗೆ ಅವಕಾಶವಿಲ್ಲ. ಕಬ್ಬು ಖರೀದಿಸಿದ ಒಂದು ತಿಂಗಳೊಳಗೆ ರೈತರ ಖಾತೆಗೆ ಹಣ ಜಮಾ ಮಾಡುತ್ತೇವೆ. ಇದು ನಮ್ಮ ವಾಗ್ದಾನ’ ಎಂದು ಹೇಳಿದರು.

ನಿರ್ದೇಶಕರಾದ ಬಸಯ್ಯ ಹಿರೇಮಠ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ಆಕಾಶ ಗುತ್ತೇದಾರ, ಗಣಪತಿ ಜಾಧವ, ಬಸನಗೌಡ ಪಾಟೀಲ ನಾಗರಾಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.